ದಾವಣಗೆರೆ: ಅಪರಿಚಿತ ವ್ಯಕ್ತಿಯೋರ್ವ ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿ ಪರಿಚಯಿಸಿಕೊಂಡು ದಾವಣಗೆರೆ ನಗರದ ವೈದ್ಯೆಯೊಬ್ಬರಿಗೆ 1.92 ಲಕ್ಷ ರೂ. ವಂಚಿಸಿರುವ ಘಟನೆ ಎಂಸಿಸಿ ಬಿಬ್ಲಾಕ್ನಲ್ಲಿ ಏಪ್ರಿಲ್ 25 ರಂದು ನಡೆದಿದೆ. ಆಕ್ಸಿಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ವೈದ್ಯೆ ಸ್ವಪ್ನಾ ವಂಚನೆಗೊಳಗಾದವರು.
ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ವೈದ್ಯೆಯ ಖಾತೆಯಿಂದ 1.92 ಲಕ್ಷ ಎಗರಿಸಿದ ವಂಚಕ - ಆಕ್ಸಿಸ್ ಬ್ಯಾಂಕ್
ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವಂಚಕನೋರ್ವ ದಾವಣಗೆರೆ ನಗರದ ವೈದ್ಯೆಯೊಬ್ಬರ ಮೊಬೈಲ್‌ನಲ್ಲಿ ಎನಿ ಡೆಸ್ಕ್ ಆ್ಯಪ್ ಇನ್‌ಸ್ಟಾಲ್ ಮಾಡಿಸಿ, ಅವರ ಕ್ರೆಡಿಟ್ ಕಾರ್ಡ್ ಮತ್ತು ಉಳಿತಾಯ ಖಾತೆಯಿಂದ 1.92 ಲಕ್ಷ ರೂ. ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನಿಮಗೆ ಹೊಸ ಕ್ರೆಡಿಟ್ ಕಾರ್ಡ್ ಬಂದಿದೆ, ಅದನ್ನು ಆಕ್ಟಿವೇಟ್ ಮಾಡಬೇಕು, ತಮ್ಮ ಹಳೆ ಕಾರ್ಡ್ ಮಾಹಿತಿ ನೀಡಿ ಎಂದು ಹೇಳಿದ್ದಾನೆ. ನಂತರ ಮೊಬೈಲ್‌ನಲ್ಲಿ ಎನಿ ಡೆಸ್ಕ್ ಆ್ಯಪ್ ಇನ್‌ಸ್ಟಾಲ್ ಮಾಡಿಸಿ, ಸ್ವಪ್ನಾ ಬಳಿ ಕ್ರೆಡಿಟ್ , ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಪಡೆದುಕೊಂಡು 1.92 ಲಕ್ಷ ರೂ. ವಂಚನೆ ಮಾಡಿದ್ದಾನೆ. ತಮ್ಮ ಮೊಬೈಲ್ಗೆ ಹಣ ಬಿಡಿಸಿದ ಸಂದೇಶ ಬಂದ ಬಳಿಕ ಮೋಸ ಹೋಗಿರುವುದು ತಿಳಿದು ಬಂದಿದ್ದು, ಈ ಸಂಬಂಧ ವೈದ್ಯೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ:ಲಾಲು ಪ್ರಸಾದ್ ಯಾದವ್ಗೆ ಸಂಬಂಧಿಸಿದ 15 ಸ್ಥಳಗಳ ಮೇಲೆ ಸಿಬಿಐ ದಾಳಿ