ಕರ್ನಾಟಕ

karnataka

ETV Bharat / city

ನಮ್ಮದು ಯುವ ಜನರ ದೇಶ, ಸಾಕಷ್ಟು ಸವಾಲುಗಳಿವೆ: ರಾಜ್ಯಪಾಲ ಗೆಹ್ಲೋಟ್

21ನೇ ಶತಮಾನ ನಮ್ಮ ದೇಶಕ್ಕೆ ಹೊಸ ದಿಶೆಯನ್ನು ನೀಡಿದ್ದು, ಭಾರತ ವಿಶ್ವಗುರು ಆಗುವ ಹಾದಿಯಲ್ಲಿ ಸಾಗುತ್ತಿದೆ. ಎಲ್ಲರೂ ದೇಶದ ಅಭಿವೃದ್ದಿಗೆ ಪೂರಕ ಚಿಂತನೆ ರೂಢಿಸಿಕೊಳ್ಳಬೇಕು ಎಂದು ರಾಜ್ಯಾಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

davanagere-university-9th-convocation-program
ನಮ್ಮ ದೇಶ ಯುವ ಪೀಳಿಗೆಯ ದೇಶ, ದೇಶದಲ್ಲಿ ಸಾಕಷ್ಟು ಸವಾಲುಗಳಿವೆ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್.

By

Published : Mar 24, 2022, 7:50 PM IST

ದಾವಣಗೆರೆ:ಭಾರತ ಯುವಜನರ ದೇಶ. ಯುವಜನರಿಗೆ ದೇಶದ ಮೇಲೆ ಸಾಕಷ್ಟು ಅಪೇಕ್ಷೆ ಇದೆ. ಜೊತೆಗೆ ಅನೇಕ ಸವಾಲುಗಳೂ ನಮ್ಮ ಮುಂದಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ದಾವಣಗೆರೆ ವಿವಿಯ ಒಂಬತ್ತನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವಿ ಪಡೆದವರಿಂದ ಪ್ರೇರಣೆ ಪಡೆದು ಹೆಚ್ಚು ಸಾಧನೆ ಮಾಡಬೇಕೆಂದರು. 21ನೇ ಶತಮಾನ ನಮ್ಮ ದೇಶಕ್ಕೆ ಹೊಸ ದಿಶೆಯನ್ನು ನೀಡಿದೆ. ಭಾರತ ವಿಶ್ವಗುರು ಆಗುವ ಹಾದಿಯಲ್ಲಿ ಸಾಗುತ್ತಿದೆ. ಎಲ್ಲರೂ ದೇಶದ ಅಭಿವೃದ್ದಿಗೆ ಪೂರಕ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.

ಸಾಧಕರಿಗೆ ಡಾಕ್ಟರೇಟ್: ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊ.ಡಾ.ಲಕ್ಷ್ಮಣ್ ತೆಲಗಾವಿ, ಜಾನಪದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿತ್ರದುರ್ಗ ಜಿಲ್ಲೆಯ ಡಾ.ಮೀರ ಸಾಬಿ ಹಳ್ಳಿ ಶಿವಣ್ಣ, ದಾವಣಗೆರೆಯ ತಪೋವನ ಇನ್ಸ್ಟಿಟ್ಯೂಟ್ ಸಿಇಒ ಡಾ.ಶಶಿಕುಮಾರ್ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:ಪೊಲೀಸರಿಗೆ ಅಥವಾ ಕೋರ್ಟ್​ಗೆ ಪಾಸ್​ಪೋರ್ಟ್ ಮುಟ್ಟುಗೋಲು ಹಾಕುವ ಅಧಿಕಾರವಿಲ್ಲ: ಹೈಕೋರ್ಟ್

ABOUT THE AUTHOR

...view details