ದಾವಣಗೆರೆ :ಕೊರೊನಾ ಭೀತಿ ಹಿನ್ನೆಲೆ ದೇಶದಾದ್ಯಂತ ಲಾಕ್ಡೌನ್ಗೆ ಕರೆ ನೀಡಲಾಗಿದ್ದರೂ ನಿಯಮ ಉಲ್ಲಂಘಿಸುವವರಿಗೆ ಹಲವೆಡೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಇದಕ್ಕೂ ಬಗ್ಗದವರಿಗೆ ಈಗ ಪೊಲೀಸರು ಕೈಮುಗಿದು ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಲಾಠಿ ಬೀಸಿದ್ರೂ ಬುದ್ಧಿ ಬರ್ತಿಲ್ಲ.. ಕೈಮುಗಿದು ಪೊಲೀಸರಿಂದ ಗಾಂಧಿಗಿರಿ.. - ಕೊರೊನಾ
ದಂಡ ಪ್ರಯೋಗಿಸಿ ಹೇಳಿದ್ದಾಯ್ತು ಆದರೂ ಲಾಕ್‌ಡೌನ್ ಇದ್ರೂ ವಾಹನಗಳ ಸವಾರರು ಹೊರಗೆ ಬರೋದು ತಪ್ಪುತ್ತಿಲ್ಲ. ಇದರಿಂದ ಪೊಲೀಸರೇ ರೋಸಿ ಹೋಗಿದ್ದ ಲಾಕ್‌ಡೌನ್ ಉಲ್ಲಂಘಿಸುವವರ ವಿರುದ್ಧ ಗಾಂಧಿ ತತ್ವ ಪಾಲಿಸುತ್ತಿದ್ದಾರೆ.
![ಲಾಠಿ ಬೀಸಿದ್ರೂ ಬುದ್ಧಿ ಬರ್ತಿಲ್ಲ.. ಕೈಮುಗಿದು ಪೊಲೀಸರಿಂದ ಗಾಂಧಿಗಿರಿ.. lockdown violators in Davanagere](https://etvbharatimages.akamaized.net/etvbharat/prod-images/768-512-6573866-thumbnail-3x2-megha.jpg)
ಕೈ ಮುಗಿದು ಪೊಲೀಸರ ಗಾಂಧಿಗಿರಿ
ಕೈಮುಗಿದು ಮನೆಯಿಂದ ಹೊರಬರಬೇಡಿ ಎಂದು ಪಿಎಸ್ಐ ಮನವಿ..
ನಗರದ ಜಯದೇವ ವೃತ್ತದಲ್ಲಿ ಪಿಎಸ್ಐ ವೀರಬಸಪ್ಪ ಕುಸಲಾಪುರ, ಕೈಮುಗಿದು ಬೈಕ್ ಸವಾರರಲ್ಲಿ ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ದಾವಣಗೆರೆಯ ಜಯದೇವ ವೃತ್ತ, ಶಿವಪ್ಪನಾಯ್ಕ ವೃತ್ತ, ಆಜಾದ್‌ನಗರ ಸೇರಿ ಹಲವೆಡೆ ಬೈಕ್ ಸವಾರರು ನಿರಂತರ ಓಡಾಟ ನಡೆಸ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದ್ದಾರೆ. ಆದ್ರೂ, ಇಲ್ಲೇ ಹೋಗಿ ಬರ್ತೀವಿ ಅಂತಾ ಸವಾರರು ಸಬೂಬು ಹೇಳುತ್ತಿದ್ದಾರೆ. ಇದು ಮುಂದುವರಿದರೆ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.