ದಾವಣಗೆರೆ:ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಅಕ್ರಮ ಮತದಾರ ಪಟ್ಟಿ ಆರೋಪ ವಿಚಾರವಾಗಿ ಕಾನೂನು ಪ್ರಕಾರ ಮತದಾನ ಪಟ್ಟಿಯಿಂದ ಏಕಾಏಕಿ ತೆಗೆಯಲು ಬರುವುದಿಲ್ಲ. ಮತದಾನಕ್ಕೆ ಅವಕಾಶ ಇದೆ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಡಿಸಿ ವಿರುದ್ಧ ಘೋಷಣೆ ಕೂಗಿದರು.
ಅಕ್ರಮ ಮತದಾರ ಪಟ್ಟಿ ಆರೋಪ ವಿಚಾರವಾಗಿ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರ (ಫೆ.19)ರಂದು ಚುನಾವಣೆ ಇರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆಂದು ವಿಚಾರಣೆಯನ್ನು ಫೆ. 24 ಕ್ಕೆ ಮುಂದೂಡಿದೆ. ಇದಕ್ಕೆ ಡಿಸಿ ಮಹಾಂತೇಶ್ ಬೀಳಗಿ ಸ್ಪಷ್ಟನೆ ನೀಡುವುದಾಗಿ ಹೇಳಿ ಸತಾಯಿಸಿದ ಹಿನ್ನಲೆ, ಕಾಂಗ್ರೆಸ್ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾಧ್ಯಮಗೋಷ್ಟಿ ನಡೆಸಿದ ಡಿಸಿ, ಕಾನೂನು ಪ್ರಕಾರ ಮತದಾನ ಪಟ್ಟಿಯಿಂದ ಏಕಾಏಕಿ ತೆಗೆಯಲು ಬರುವುದಿಲ್ಲ ಹೀಗಾಗಿ 62 ಮತದಾರರು ಮತದಾನಕ್ಕೆ ಅವಕಾಶ ಇದೆ ಎಂದರು. ಹೀಗೆ ಹೇಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಡಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.