ದಾವಣಗೆರೆ : ವಿದ್ಯುತ್ ವ್ಯತ್ಯಯವಾದ ಹಿನ್ನೆಲೆಯಲ್ಲಿ ಡಯಾಲಿಸಿಸ್‌ಗೆ ಬಂದವರು ಪರದಾಡಿದ ಘಟನೆ ಜಿಲ್ಲೆಯ ಹರಿಹರದ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕೈಕೊಟ್ಟ ಕರೆಂಟ್: ಅರ್ಧಕ್ಕೆ ನಿಂತ ಡಯಾಲಿಸಿಸ್ ಚಿಕಿತ್ಸೆಯಿಂದ ರೋಗಿಗಳ ಪರದಾಟ - ದಾವಣಗೆರೆ ಜಿಲ್ಲಾ ಆಸ್ಪತ್ರೆ ಡಯಾಲಿಸಿಸ್ ಚಿಕಿತ್ಸೆ ಸುದ್ದಿ
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಧುಮೇಹಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವಿದ್ಯುತ್ ಸ್ಥಗಿತವಾಗಿದೆ. ನಂತರ ಯುಪಿಎಸ್ ಬ್ಯಾಟರಿಯಿಂದ ಅರ್ಧಗಂಟೆ ಡಯಾಲಿಸಿಸ್ ನಡೆಸಲಾಯಿತು. ಜನರೇಟರ್ ಇದ್ದರೂ, ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿತ್ತು.
ದಾವಣಗೆರೆ ಜಿಲ್ಲಾ ಆಸ್ಪತ್ರೆ
ಮಧುಮೇಹಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವಿದ್ಯುತ್ ಸ್ಥಗಿತವಾಗಿದೆ. ನಂತರ ಯುಪಿಎಸ್ ಬ್ಯಾಟರಿಯಿಂದ ಅರ್ಧಗಂಟೆ ಡಯಾಲಿಸಿಸ್ ನಡೆಸಲಾಯಿತು. ಜನರೇಟರ್ ಇದ್ದರೂ, ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ.
ಇನ್ನೂ ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದವರಿಗೆ ಜೀವ ಭಯ ಕಾಡಿತ್ತು. ಬಳಿಕ ವೈದ್ಯರ ಮೂಲಕವೇ ರೋಗಿಗಳಿಗೆ ರಕ್ತವನ್ನು ಮರುಪೂರಣ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಬೇಜಾವಾಬ್ದಾರಿ ತನಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.