ದಾವಣಗೆರೆ :ದೇಶದಲ್ಲಿ ಭೀತಿ ಸೃಷ್ಟಿಸಿರುವ ಕೊರೊನಾ ಸೋಂಕು ತಡೆಗೆ ದಿನವಿಡೀ ಹೋರಾಟ ನಡೆಸುತ್ತಿರುವವರಿಗೆ ಪ್ರಧಾನಿಯವರ ಕರೆ ಮೇರೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಜಾಗಟೆ ಬಾರಿಸುವ ಮೂಲಕ ಧನ್ಯವಾದ ಅರ್ಪಿಸಿದರು.
'ಕೊರೊನಾ ವಾರಿಯರ್ಸ್'ಗಾಗಿ ಜಾಗಟೆ ಬಾರಿಸಿ, ಚಪ್ಪಾಳೆ ತಟ್ಟಿದ ದಾವಣಗೆರೆ ಡಿಸಿ - ಕೊರೊನಾ ವೈರಸ್
ಕೊರೊನಾ ವೈರಸ್ ತಡೆಗೆ ಪ್ರಧಾನಿಯವರು ಕರೆ ಕೊಟ್ಟಿರುವ ಜನತಾ ಕರ್ಪ್ಯೂ ಭಾಗವಾಗಿ ಸಂಜೆ 5ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿಗಳು ಮತ್ತು ನಗರ ನಿವಾಸಿಗಳು ಜಾಗಟೆ, ಚಪ್ಪಾಳೆ ಮತ್ತು ಸೈರನ್ ಬಾರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಿದರು.
ಜನತಾ ಕರ್ಪ್ಯೂ
ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಸಂಪೂರ್ಣ ಸಾಥ್ ನೀಡಿದ್ದಾರೆ. ಸಂಜೆ 5 ಗಂಟೆಗೆ ತಮ್ಮ ನಿವಾಸದಲ್ಲಿ ಜಾಗಟೆ ಬಾರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾಡಳಿತದ ವತಿಯಿಂದ ಅಗ್ನಿಶಾಮಕದಳ ವಾಹನದ ಸೈರನ್ ಕೂಗಿಸುವ ಮೂಲಕ ಗೌರವ ಸಲ್ಲಿಸಿದರು.
ಕೆಟಿಜಿನಗರ, ಕೆಇಬಿ ರಸ್ತೆ ಸೇರಿದಂತೆ ನಗರದ ಹಲವೆಡೆ ಜನರು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಅರ್ಪಿಸಿದರು.