ಕರ್ನಾಟಕ

karnataka

ETV Bharat / city

ದಾವಣಗೆರೆ ಎಪಿಎಂಸಿಯಲ್ಲಿ‌ ಲಾರಿ ಅಸೋಸಿಯೇಷನ್-ವರ್ತಕರ ನಡುವೆ ಮುಸುಕಿನ ಗುದ್ದಾಟ: ಹೈರಾಣಾದ ಅನ್ನದಾತ

ಲಾರಿ ಅಸೋಸಿಯೇಷನ್ ಹಾಗೂ ಎಪಿಎಂಸಿ ಮಾರುಕಟ್ಟೆ ಖರೀದಿದಾರರ ಮಧ್ಯೆ ಸರಕು ಸಾಗಾಣಿಕ ದಂಡ ಮತ್ತು ಲಾರಿ ಬಾಡಿಗೆ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು, ಆರ್‌ಟಿಒ ಹಾಗೂ ಖರೀದಿದಾರರ ಮಧ್ಯೆ ವಾಗ್ವಾದವೂ ನಡೆಯಿತು.

davanagere-apmc-lorry-association-and-traders-fight
ದಾವಣಗೆರೆ ಎಪಿಎಂಸಿ

By

Published : Nov 3, 2020, 3:51 PM IST

ದಾವಣಗೆರೆ: ನಗರದ ಎಪಿಎಂಸಿ ಆವರಣದಲ್ಲಿ ಲಾರಿ ಅಸೋಸಿಯೇಷನ್ ಹಾಗೂ ಎಪಿಎಂಸಿ ಮಾರುಕಟ್ಟೆ ಖರೀದಿದಾರರ ಮಧ್ಯೆ ಮುಸುಕಿನ‌ ಗುದ್ದಾಟ ಮುಂದುವರೆದಿದ್ದು, ಮೆಕ್ಕೆಜೋಳ, ಭತ್ತವನ್ನು‌ ಮಾರುಕಟ್ಟೆಗೆ ತಂದಿದ್ದ ರೈತರು ಹೈರಣಾದ ಘಟನೆ ನಡೆದಿದೆ.

ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರುತ್ತಿರುವ ಲಾರಿಗಳಿಗೆ ಆರ್​ಟಿಒ ಅಧಿಕಾರಿಗಳು ಹೆಚ್ಚುವರಿ ದಂಡ ವಿಧಿಸುತ್ತಿದ್ದಾರೆ. ಆದ್ರೆ ಸ್ಥಳೀಯ ಮಾಲೀಕರು ಇಲ್ಲಿನ ಲಾರಿಗಳ ಮೂಲಕ ಸಾಗಣೆ ಮಾಡಬೇಕು.‌ ಬೇರೆ ಜಿಲ್ಲೆಗಳ‌ ಲಾರಿಗಳನ್ನು ಇಲ್ಲಿಗೆ ತರಬಾರದು. ಈಗ ವಿಧಿಸಿರುವ ದಂಡ ಸರಿಯಾಗಿಯೇ ಇದೆ ಎಂಬುದು ದಾವಣಗೆರೆ ಲಾರಿ‌ ಮಾಲೀಕರ‌ ಅಸೋಸಿಯೇಷನ್​ನ ವಾದವಾಗಿದೆ.

ದಾವಣಗೆರೆ ಎಪಿಎಂಸಿಯಲ್ಲಿ‌ ಲಾರಿ ಅಸೋಸಿಯೇಷನ್, ವರ್ತಕರ ಮುಸುಕಿನ ಗುದ್ದಾಟ

ಆದ್ರೆ ಕಡಿಮೆ‌ ಬೆಲೆಗೆ ಲಾರಿಗಳು ಬಾಡಿಗೆ ಸಿಗುತ್ತಿರುವ ಕಾರಣ ವರ್ತಕರು ಬೇರೆ ಜಿಲ್ಲೆಗಳ‌ ಲಾರಿಗಳತ್ತ ಒಲವು ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಅಡ್ಡಿಪಡಿಸಬಾರದು. ನೀವು ಕಡಿಮೆ ದರಕ್ಕೆ ಬಾಡಿಗೆ ನೀಡಿದರೆ ಇಲ್ಲಿಂದಲೇ ಲಾರಿಗಳ ಮೂಲಕ ಭತ್ತ, ಮೆಕ್ಕೆಜೋಳ ಕಳುಹಿಸಿಕೊಡುತ್ತೇವೆ ಎನ್ನೋದು ವರ್ತಕರ ಮಾತಾಗಿದೆ.

ದಂಡ ವಿಧಿಸಿದ ಅಧಿಕಾರಿ ಸ್ಥಳಕ್ಕೆ ಬರುವಂತೆ ರೈತರು, ಮೆಕ್ಕೆಜೋಳ ಖರೀದಿದಾರರು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸರು, ಆರ್‌ಟಿಒ ಹಾಗೂ ಖರೀದಿದಾರರ ಮಧ್ಯೆ ವಾಗ್ವಾದವೂ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರೂ ವರ್ತಕರು ಕೇಳಲಿಲ್ಲ‌. ಈ ವೇಳೆಯೂ ಮಾತಿನ ಚಕಮಕಿ‌ ನಡೆಯಿತು.‌

ABOUT THE AUTHOR

...view details