ಕರ್ನಾಟಕ

karnataka

ETV Bharat / city

ನ್ಯಾಮತಿಯಲ್ಲಿ ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ 2 ಮನೆಗಳು! - Cylinder blast in Davanagere news

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ತೆಗ್ಗಿನಹಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡು ಮನೆಗಳು ಹೊತ್ತಿ ಉರಿದಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ದಾವಣಗೆರೆಯಲ್ಲಿ ಸಿಲಿಂಡರ್ ಸ್ಫೋಟ
ದಾವಣಗೆರೆಯಲ್ಲಿ ಸಿಲಿಂಡರ್ ಸ್ಫೋಟ

By

Published : Jun 5, 2020, 3:50 PM IST

Updated : Jun 5, 2020, 4:54 PM IST

ದಾವಣಗೆರೆ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎರಡು ಮನೆಗಳು ಹೊತ್ತಿ ಉರಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ತೆಗ್ಗಿನಹಳ್ಳಿ ಗ್ರಾಮದಲ್ಲಿ ಜರುಗಿದೆ. ಘಟನೆಯಲ್ಲಿ ನರಸಪ್ಪ ಎಂಬವವರು ಗಾಯಗೊಂಡಿದ್ದು, ಎರಡು ಮನೆಗಳು ಸುಟ್ಟು ಕರಕಲಾಗಿವೆ.

ನ್ಯಾಮತಿಯಲ್ಲಿ ಸಿಲಿಂಡರ್ ಸ್ಫೋಟ

ಟ್ರ್ಯಾಕ್ಟರ್​ಗೆ ವೆಲ್ಡಿಂಗ್ ಮಾಡಲು ಮನೆಯಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಈ ವೇಳೆ ಕಿಡಿ ತಗುಲಿದ ಪರಿಣಾಮ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮನೆಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Last Updated : Jun 5, 2020, 4:54 PM IST

ABOUT THE AUTHOR

...view details