ದಾವಣಗೆರೆ:ನಗರದ ಪಿ.ಬಿ.ರಸ್ತೆಯ ತರಕಾರಿ ಮಾರುಕಟ್ಟೆ ಮುಂಭಾಗ ಕಾರು ಡಿಕ್ಕಿ ಹೊಡೆದು ಹಸುವೊಂದು ಮೃತಪಟ್ಟಿತು. ಈ ದೃಶ್ಯ ನೋಡಿ ಇತರೆ ಹಸುಗಳು ಸ್ಥಳಕ್ಕೆ ಬಂದು ಮೂಕ ರೋದನೆಪಡುತ್ತಿದ್ದ ದೃಶ್ಯ ಜನತೆಯನ್ನು ಮಮ್ಮಲ ಮರುಗುವಂತೆ ಮಾಡಿದೆ.
ದಾವಣಗೆರೆಯಲ್ಲಿ ಕಾರು ಡಿಕ್ಕಿಯಾಗಿ ಹಸು ದಾರುಣ ಸಾವು: ಗೋವುಗಳ ಮೂಕ ರೋದನೆ - ಗೋವುಗಳ ಮೂಕ ರೋದನೆ
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹಸುವಿನ ಮುಂದೆ ಗೋವುಗಳು ಮೂಕ ರೋದನೆ ವ್ಯಕ್ತಪಡಿಸಿರುವ ಘಟನೆ ದಾವಣಗೆರೆಯಲ್ಲಿ ನಡೆಯಿತು.
ಕಾರು ಡಿಕ್ಕಿ ಹೊಡೆದು ಹಸು ಸಾವು: ಗೋವುಗಳ ಮೂಕ ರೋದನೆ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಸಾವನ್ನಪ್ಪಿದ ಹಸುವಿನ ಮುಂದೆ ನಿಂತ ಹಸುಗಳು ಮೂಕರೋದನೆ ಪಟ್ಟವು. ಹಸುಗಳ ರೋದನೆ ನೋಡಿ ಸ್ಥಳೀಯರು ಭಾವುಕರಾದರು.
ಸಾವನ್ನಪ್ಪಿದ ಹಸುವಿಗೆ ಪೂಜೆ ಸಲ್ಲಿಸಿ ಹೂವು, ಹಾಲು, ಹಾಕಿ ಸ್ಥಳೀಯರು ಸಂತಾಪ ಸೂಚಿಸಿದರು. ಹಸು ಸಾವಿಗೆ ಕಾರಣನಾದ ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಅಂತಿಮ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದರು.