ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಬೆಡ್ಗಳ ಅಭಾವ ಎದುರಾಗಿ ಜನ ಆ್ಯಂಬುಲೆನ್ಸ್ಗಳಲ್ಲೇ ನರಳಿ ಪ್ರಾಣ ಬಿಡುತ್ತಿದ್ದರು. ಆದರೆ ಸದ್ಯ ಈಗ ಬೆಡ್ ಸಮಸ್ಯೆ ಬಗೆಹರಿದಂತೆ ಕಾಣುತ್ತಿದೆ.
ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆ ದಾವಣಗೆರೆ ಜಿಲ್ಲಾಡಳಿತ ಸರ್ಕಾರಿ ಜಿಲ್ಲಾ, ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ 3 ಸಾವಿರ ಬೆಡ್ಗಳನ್ನು ಸೋಂಕಿತರಿಗಾಗಿಯೇ ಮೀಸಲಿರಿಸಿದೆ. ಆದರೆ ಕೊರೊನಾ 2ನೇ ಅಲೆಯಷ್ಟು 3ನೇ ಅಲೆ ತೀವ್ರವಾಗಿರದ ಹಿನ್ನೆಲೆ ಕೇವಲ 56 ಜನ ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಡಿಸಿ ಹಾಗೂ ಡಿಹೆಚ್ಒ ಮಾಹಿತಿ ನೀಡಿರುವುದು.. ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜಿಲ್ಲೆಯಲ್ಲಿ 1,433 ಸಕ್ರಿಯ ಪ್ರಕರಣಗಳಿದ್ದು, ಹೆಚ್ಚು ರೋಗ ಲಕ್ಷಣಗಳಿರುವವರು ಮಾತ್ರ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಉಳಿದ ಶೇ. 94ರಷ್ಟು ಜನ ಸೋಂಕಿತರಿಗೆ ಕಡಿಮೆ ರೋಗ ಲಕ್ಷಣಗಳಿದ್ದರಿಂದ ಹೋಂ ಐಸೋಲೇಷನ್ನಲ್ಲಿದ್ದಾರೆ. ಇವರ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಗವಹಿಸಿದ್ದಾರೆ.
ಡಬಲ್ ಡೋಸ್ ವ್ಯಾಕ್ಸಿನೇಷನ್ ಅನ್ನು ಶೇ.99ರಷ್ಟು ಆರೋಗ್ಯ ಇಲಾಖೆ ಪೂರ್ಣಗೊಳಿಸಿದೆ. ಜನ ಆಸ್ಪತ್ರೆಯತ್ತ ಮುಖಮಾಡದೆ ಇರುವುದಕ್ಕೆ ಪ್ರಮುಖ ಕಾರಣ ವ್ಯಾಕ್ಸಿನೇಷನ್ ಎನ್ನಲಾಗಿದೆ. ವ್ಯಾಕ್ಸಿನ್ ನಿಂದಾಗಿ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಕೊರೊನಾ 3ನೇ ಅಲೆ ಅಷ್ಟು ಪರಿಣಾಮ ಬೀರಿಲ್ಲ ಎಂಬ ಮಾತು ಆರೋಗ್ಯ ಇಲಾಖೆಯಿಂದ ಕೇಳಿ ಬರುತ್ತಿದೆ.
ಇದನ್ನೂ ಓದಿ:ಈ ಮಹಿಳೆಯ ನಾಲಿಗೆ ಮೇಲೆ ಕೂದಲು ಬಂದಿವೆಯಂತೆ... ಕಾರಣ ಗೊತ್ತಾದ್ರೆ ಅಚ್ಚರಿಗೊಳಗಾಗ್ತೀರ!