ದಾವಣಗೆರೆ: ಕರೆಂಟ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ. ವೀಣಾ(28), ರವಿಶಂಕರ್ (40) ಮೃತಪಟ್ಟ ಗಂಡ, ಹೆಂಡತಿ. ಬಟ್ಟೆ ಒಣಗಲು ಹಾಕಿದ್ದ ವೈರ್‌ಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ.
ಬಟ್ಟೆ ಒಣಹಾಕಿದ್ದ ವೈರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ದಾವಣಗೆರೆಯಲ್ಲಿ ದಂಪತಿ ಸಾವು - ಮಾಯಕೊಂಡ ಠಾಣೆ ಪೊಲೀಸರು
ದಾವಣಗೆರೆಯ ಬಾವಿಯಾಳು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ದಂಪತಿ ಮೃತಪಟ್ಟಿದ್ದಾರೆ.
ದಂಪತಿ ಸಾವು
ಪತಿ ರವಿಶಂಕರ್ಗೆ ಕರೆಂಟ್ ಶಾಕ್ ಹೊಡೆದಿರುವುದನ್ನು ಕಂಡು ಪತ್ನಿ ವೀಣಾ ಕಾಪಾಡಲು ಮುಂದಾದಾಗ ಆಕೆಗೂ ವಿದ್ಯುತ್ ಸ್ಪರ್ಶಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಯಕೊಂಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಕೆಲ ದಿನಗಳಿಂದ ನನ್ನನ್ನು ಯಾರೋ ಕೊಲೆ ಮಾಡ್ತಾರೆ ಅಂತಿದ್ದ ಒಂಟಿ ವೃದ್ಧೆ.. ಆತಂಕದ ಬೆನ್ನಲ್ಲೇ ಅಜ್ಜಿ ಮರ್ಡರ್
Last Updated : Aug 14, 2022, 9:03 AM IST