ದಾವಣಗೆರೆ:ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಚಾಲಾಕಿ ದಂಪತಿಯನ್ನು ಜಿಲ್ಲೆಯ ಹರಿಹರ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮದ ಹನುಮಂತಪ್ಪ(50) ಹಾಗೂ ಶಾಂತ (40) ಬಂಧಿತ ದಂಪತಿ.
ದಾವಣಗೆರೆ:ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಚಾಲಾಕಿ ದಂಪತಿಯನ್ನು ಜಿಲ್ಲೆಯ ಹರಿಹರ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮದ ಹನುಮಂತಪ್ಪ(50) ಹಾಗೂ ಶಾಂತ (40) ಬಂಧಿತ ದಂಪತಿ.
ಬಂಧಿತರಿಂದ 1.31 ಲಕ್ಷ ರೂ. ಮೌಲ್ಯದ ಖೋಟಾನೋಟುಗಳು, ಒಂದು ಕಲರ್ ಪ್ರಿಂಟರ್ ಹಾಗು ಇಂಕ್ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇವರು 2000, 500, 200, 100 ರೂ. ಮುಖಬೆಲೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರು. ಹರಿಹರ ಸಂತೆಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ವೇಳೆ ಹನುಮಂತಪ್ಪ ದಂಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹರಿಹರ ಸಿಪಿಐ ಗುರುನಾಥ್, ಪಿಎಸ್ಐ ಪ್ರಭು ಡಿ. ಕೆಳಗಿನಮನಿ ನೇತೃತ್ವದ ಪೊಲೀಸ್ ಸಿಬ್ಬಂದಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅವರು ಬಹುಮಾನ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.