ದಾವಣಗೆರೆ:ದುಬೈನಿಂದ ಬಂದಿದ್ದ ಹರಪನಹಳ್ಳಿ ತಾಲೂಕಿನ ಕೆಂಚಿಕೇರಿ ಯುವಕನಿಗೆ ಕೆಮ್ಮು, ನೆಗಡಿ, ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಕೊರೊನಾ ಶಂಕೆ, ವೈದ್ಯರ ವರದಿಗಾಗಿ ಕಾಯುತ್ತಿದ್ದೇವೆ: ಡಿಸಿ ಮಹಾಂತೇಶ್ ಬೀಳಗಿ
ಪನಹಳ್ಳಿ ತಾಲೂಕಿನ ಕೆಂಚಿಕೇರಿ ಯುವಕನಿಗೆ ಕೆಮ್ಮು, ನೆಗಡಿ, ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಿಳಿಸಿದರು.
ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಐಸೋಲೇಟೆಡ್ ವಾರ್ಡ್ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ದುಬೈನಿಂದ ನಾಗರಾಜ್ ಬಗ್ಗೆ ಬಳ್ಳಾರಿ ಡಿಸಿ ಮಾಹಿತಿ ನೀಡಿದ್ದರು. ದಾವಣಗೆರೆ ಹತ್ತಿರವಾಗುವ ಕಾರಣ ಯುವಕನಿಗೆ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ. ಸದ್ಯಕ್ಕೆ ಅಪಾಯ ಏನೂ ಇಲ್ಲ. ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 132 ತುರ್ತು ನಿಗಾ ಘಟಕಗಳಿದ್ದು, ಯಾವುದೇ ಸಮಸ್ಯೆಯಾದರೂ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಚಿಗಟೇರಿ ಆಸ್ಪತ್ರೆಯಲ್ಲಿ 10, ಬಾಪೂಜಿ ಹಾಗೂ ಎಸ್.ಎಸ್. ಆಸ್ಪತ್ರೆಯಲ್ಲಿ 15 ಐಸೊಲೇಟೆಡ್ ವಾರ್ಡ್ ಗಳನ್ನು ಆರಂಭಿಸಲಾಗಿದೆ. ನಗರದಲ್ಲೇ 50 ವಾರ್ಡ್ಗಳ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.