ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇಂದು ಜಿಲ್ಲೆಯಲ್ಲಿ 142 ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಎರಡನೇ ಅಲೆಯಲ್ಲಿ ಮೊದಲ ಬಾರಿ ಶತಕವನ್ನು ಚಿಕ್ಕಮಗಳೂರು ಜಿಲ್ಲೆ ದಾಟಿದೆ. ಸದ್ಯ ಜಿಲ್ಲೆಯಲ್ಲಿ 649 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಚಿಕ್ಕಮಗಳೂರಲ್ಲಿ ಇಲ್ಲಿವರೆಗೂ ಕೊರೊನಾದಿಂದ 142 ಮಂದಿ ಸಾವನ್ನಪ್ಪಿದ್ದಾರೆ. ಪ್ರಕರಣಗಳು ಹೆಚ್ಚಾಗುತ್ತಿರೋದನ್ನು ನೋಡಿ ಜನರು ಭಯ ಭೀತರಾಗುತ್ತಿದ್ದಾರೆ.
ದಾವಣಗೆರೆಯ ಇಂದಿನ ಪ್ರಕರಣಗಳು ದಾವಣಗೆರೆಯಲ್ಲಿ ಕೊರೊನಾರ್ಭಟ
ಬೆಣ್ಣೆನಗರಿ ದಾವಣಗೆರೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇಂದು ಒಂದೇ ದಿನ 199 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮತ್ತೆ ದಾವಣಗೆರೆ ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆಯಾ ಎಂದು ಜನರಲ್ಲಿ ಆತಂಕ ಮನೆ ಮಾಡಿದೆ.
ಇಂದು ಒಂದೇ ದಿನ 199 ಹೊಸ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ, ಡಿಸಿ ಹಾಗೂ ಎಸ್ಪಿ ಫೀಲ್ಡಿಗಿಳಿದು ಜನಜಂಗುಳಿ ತುಂಬಿದ್ದ ಬಟ್ಟೆ ಅಂಗಡಿ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡು ಮಾಸ್ಕ್ ಅಭಿಯಾನ ಮಾಡಿದ್ರು. ಕೊರೊನಾ ನಿಯಮ ಉಲ್ಲಂಘಿಸಿದ ಕೆಲ ಬಟ್ಟೆ ಅಂಗಡಿ ಮಾಲೀಕರಿಗೆ 50 ಸಾವಿರ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಇನ್ನು ಬಟ್ಟೆ ಖರೀದಿ ಮಾಡಲು ಮಾಸ್ಕ್ ಹಾಕದೇ ಬಂದಿದ್ದ ಸಾರ್ವಜನಿಕರಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸರ್ಕಾರದ ನಿರ್ದೇಶನದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ದಾವಣಗೆರೆಯಲ್ಲಿ ಸಭೆ ಸಮಾರಂಭ ನಿಷೇಧ ಮಾಡಲಾಗಿದೆ. ಜನಜಂಗುಳಿ ತುಂಬಿದ್ದರೆ ಕೇಸ್ ದಾಖಲು ಮಾಡುತ್ತೇವೆ, ದಾವಣಗೆರೆಯಲ್ಲಿ ಇನ್ನಷ್ಟು ಕಠಿಣ ಕ್ರಮಕ್ಕೆ ನಿರ್ಧಾರಿಸಲಾಗಿದೆ ಎಂದು ಮಾಹಿತಿ ನೀಡಿದರು.