ದಾವಣಗೆರೆ: ಶಾಮನೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿದೆ. ರಾಜ್ಯಾದ್ಯಂತ ಮೂರುವರೆ ಸಾವಿರ ಬಸ್ ಹಾಗು ಐದು ಸಾವಿರ ಕಾರುಗಳು, ಹಾಗು ಆರು ಸಾವಿರಕ್ಕೂ ಹೆಚ್ಚು ದ್ವಿಚಕ್ರವಾಹನದ ಮೂಲಕ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯನವರ ಕಾರ್ಯಕ್ರಮ ವೀಕ್ಷಿಸಲು ಬೆಣ್ಣೆನಗರಿಗೆ ಆಗಮಿಸಿದ್ದಾರೆ.
ಒಟ್ಟು ಐದು ಲಕ್ಷ ಜನ ಸೇರಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಹಾಗು ಕೈ ಕಾರ್ಯಕರ್ತರಿಗೆ ವಿವಿಧ ಖಾದ್ಯಗಳನ್ನು ತಯಾರಿಸಲಾಗಿದೆ. ಬೆಳಗ್ಗೆಯಿಂದಲೇ ಉಪಹಾರ ಸೇವಿಸಿರುವ ಕಾರ್ಯಕರ್ತರು ಮೈಸೂರು ಪಾಕ್, ಪಲಾವ್, ಮೊಸರನ್ನ ಹಾಗು ಬಿಸಿಬೇಳೆ ಬಾತ್ ಸವಿದ್ರು. ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಜಿ, ಪರಮೇಶ್ವರ್ ಬಸವರಾಜ್ ರಾಯರೆಡ್ಡಿ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಶಿವರಾಜ್ ತಂಗಡಗಿ, ಸತೀಶ್ ಜಾರಕಿಹೊಳಿ, ಯು ಟಿ ಖಾದರ್ ಮತ್ತಿತರರು ಭಾಗಿಯಾಗಿದ್ದಾರೆ.
ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹರಿದು ಬಂದ ಜನ ಸಾಗರ ಚಿತ್ರದುರ್ಗ ಪ್ರವಾಸದಲ್ಲಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಇನ್ನೇನು ಆಗಮಿಸಲಿದ್ದಾರೆ. 50 ಎಕರೆ ಈ ಜಮೀನಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಸಿದ್ದರಾಮಯ್ಯನವರು ನೀಡಿದ ಜನಪರ ಯೋಜನೆಗಳ ಛಾಯಾಚಿತ್ರ ಪ್ರದರ್ಶನ ಮಾಡಲಾಯಿತು. ಇದೇ ವೇಳೆ ಸಿದ್ದರಾಮಯ್ಯನವರು ನಡೆದುಬಂದ ದಾರಿ ಬಗ್ಗೆ ಕಿರುಚಿತ್ರ ಪ್ರದರ್ಶಿಸಿದ ತಕ್ಷಣ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ರು. ಬಳಿಕ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಹಾಕಿದ್ರು.
ಸೆಲ್ಫಿಗೆ ಮುಗಿಬಿದ್ದ ಶಾಸಕರು ಹಾಗು ಶಾಸಕಿಯರು: ಕಾರ್ಯಕ್ರಮ ನಡೆಯುವ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗು ಅಂಜಲಿ ನಿಂಬಾಳ್ಕರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ರು. ವೇದಿಕೆ ಮುಂಭಾಗದಲ್ಲಿ ಸಿದ್ದರಾಮಯ್ಯ ಫೋಟೋ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸಿದರು.
ಓದಿ:ಸಿದ್ದರಾಮಯ್ಯ ಉತ್ಸವ: ಬೀದರ್, ಬೆಳಗಾವಿಯಿಂದ ವಿಶೇಷ ಟ್ರೈನ್ನಲ್ಲಿ ಆಗಮಿಸಿದ ಫ್ಯಾನ್ಸ್.. ಬಾದಾಮಿಯಿಂದಲೇ ಲಕ್ಷಾಂತರ ಜನ ಕಾರ್ಯಕ್ರಮದಲ್ಲಿ ಭಾಗಿ!