ಕರ್ನಾಟಕ

karnataka

ETV Bharat / city

ಕೋವಿಡ್​ ಸೆಂಟರ್​ನಲ್ಲಿ ಡ್ಯಾನ್ಸ್​, ಹೋಮ ಮಾಡಿದ ಶಾಸಕ ರೇಣುಕಾಚಾರ್ಯ ವಿರುದ್ಧ ದೂರು - ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಶಾಸಕ ರೇಣುಕಾಚಾರ್ಯ ಅವರು, ಕೋವಿಡ್​​ ಕೇರ್ ಸೆಂಟರ್​ನಲ್ಲಿ ಹೋಮ, ಮನರಂಜನೆ, ಡ್ಯಾನ್ಸ್ ಸೇರಿದಂತೆ ಇತರ ಚಟುವಟಿಕೆಗಳನ್ನು ನಡೆಸಿ ತಮ್ಮ ಸರ್ಕಾರವೇ ಜಾರಿ ಮಾಡಿರುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಕಾನೂರು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ದಾವಣಗೆರೆ ಡಿಸಿ ಹಾಗೂ ಎಸ್ಪಿಯವರಿಗೆ ಲಿಖಿತ ದೂರು ನೀಡಲಾಗಿದೆ.

complaint-to-district-collector-and-sp-against-mla-renukacharya
ಶಾಸಕ ರೇಣುಕಾಚಾರ್ಯ

By

Published : Jun 18, 2021, 6:42 PM IST

ದಾವಣಗೆರೆ: ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ದ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್​ನಲ್ಲಿ ಹೋಮ, ಮನೋರಂಜನೆ, ಡ್ಯಾನ್ಸ್, ವಾಸ್ತವ್ಯ ಮಾಡಿದ ಹಿನ್ನೆಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಶಾಸಕ ರೇಣುಕಾಚಾರ್ಯ ವಿರುದ್ಧ ಜಿಲ್ಲಾಧಿಕಾರಿ ಹಾಗು ಎಸ್ಪಿಗೆ ದೂರು...!

ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಶಾಸಕರ ವಾಸ್ತವ್ಯ ವಿಚಾರವಾಗಿ ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಸಿಬಿ ರಿಷ್ಯಂತ್ ರವರಿಗೆ ದೂರು ಸಲ್ಲಿಸಲಾಗಿದೆ.

ಶಾಸಕ ರೇಣುಕಾಚಾರ್ಯ ವಿರುದ್ಧ ಜಿಲ್ಲಾಧಿಕಾರಿ ಹಾಗು ಎಸ್ಪಿಗೆ ದೂರು...!

ಈ ಕುರಿತು ದಾವಣಗೆರೆಯಲ್ಲಿ ಭ್ರಷ್ಟಾಚಾರ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್ ಪ್ರತಿಕ್ರಿಯಿಸಿ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೇರ್ ಸೆಂಟರ್ ನಲ್ಲಿ ಹೋಮ, ಮನರಂಜನೆ, ಡ್ಯಾನ್ಸ್ ಸೇರಿದಂತೆ ಇತರ ಚಟುವಟಿಕೆಗಳನ್ನು ನಡೆಸಲಾಗಿದೆ. ಸರ್ಕಾರವೇ ಈ ರೀತಿಯ ಚಟುವಟಿಕೆಗಳನ್ನು ಕೋವಿಡ್ ಕೇರ್ ಸೆಂಟರ್​ನಲ್ಲಿ ಮಾಡುವಂತಿಲ್ಲ ಎಂದು ನಿಯಮ ಜಾರಿಗೆ ತಂದಿದೆ. ಇದರ ನಡುವೆಯೂ ಶಾಸಕರು ಸರ್ಕಾರದ ನಿಯಮವನ್ನು ಉಲ್ಲಂಘಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ದಾವಣಗೆರೆ ಡಿಸಿ, ಎಸ್ಪಿಗೆ ಲಿಖಿತ ದೂರು ನೀಡಿದ್ದು, ಕ್ರಮ ಕೈಗೊಳ್ಳದೆ ಇದ್ರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದರು.

ABOUT THE AUTHOR

...view details