ಕರ್ನಾಟಕ

karnataka

ETV Bharat / city

ಸಿಎಂ ಭಾಷಣದ ವೇಳೆ ಡಿಸಿಎಂ ನೀಡಬೇಕೆಂಬ ಕೂಗು: ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ - davangere CM B.S yediyurappa news

ಇಂದು ಬಿ.ಎಸ್.​ ಯಡಿಯೂರಪ್ಪ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದರು. ಸಿಎಂ ಭಾಷಣ ಮಾಡುವ ವೇಳೆ ಡಿಸಿಎಂ, ಡಿಸಿಎಂ ಎಂಬ ಕೂಗು ಮತ್ತೆ ಕೇಳಿ ಬಂತು.

CM B.S yediyurappa
ಬಿ.ಎಸ್.​ ಯಡಿಯೂರಪ್ಪ

By

Published : Feb 9, 2020, 6:42 PM IST

ದಾವಣಗೆರೆ: ಇಂದು ಬಿ.ಎಸ್.​ ಯಡಿಯೂರಪ್ಪ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದರು. ಸಿಎಂ ಭಾಷಣ ಮಾಡುವ ವೇಳೆ ಡಿಸಿಎಂ, ಡಿಸಿಎಂ ಎಂಬ ಕೂಗು ಮತ್ತೆ ಕೇಳಿ ಬಂತು.

ವಾಲ್ಮೀಕಿ ಜಾತ್ರೆಗೆ ಆಗಮಿಸಿ, ಭಾಷಣ ಮಾಡಿದ ಬಿ.ಎಸ್.​ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕೆಲವರು ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕು ಎಂದು ಘೋಷಣೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದು ಮಧ್ಯಪ್ರವೇಶಿಸಿದ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ, ಯಡಿಯೂರಪ್ಪ ಅವರಿಗೆ ಭಾಷಣ ನಿಲ್ಲಿಸುವಂತೆ ಮನವಿ ಮಾಡಿದ್ರು. ಸಾಹೇಬ್ರೆ ಒನ್ ನಿಮಿಷ. ನಾಡಿನ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. ದಯವಿಟ್ಟು ಎಲ್ಲರು ಕುಳಿತುಕೊಳ್ಳಿ, ನೀವು ಹೀಗೆ ಮಾಡಿದ್ರೆ ಬೇರೆ ಮಾತನಾಡಬೇಕಾಗುತ್ತದೆ ಎಂದು ಪ್ರಸನ್ನಾನಂದ ಶ್ರೀಗಳು ಘೋಷಣೆ ಹಾಕುವವರಿಗೆ ಖಡಕ್ ಆಗಿಯೇ ವಾರ್ನಿಂಗ್ ನೀಡಿದರು.

ಬಳಿಕ ಯಡಿಯೂರಪ್ಪ ಭಾಷಣ ಮುಂದುವರಿಸಿ, ವಾಲ್ಮೀಕಿ ಸಮುದಾಯ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಡಿಸಿಎಂ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ABOUT THE AUTHOR

...view details