ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಾವು ಏನು ಬೇಕಿದ್ರೂ ಮಾತನಾಡಬಹುದು ಎಂದುಕೊಂಡಿದ್ದಾರೆ. ಎಲ್ಲರ ಬಗೆಗೂ ಲಘುವಾಗಿ ಮಾತನಾಡ್ತಾರೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ. ಸಂಸದೆ ಸುಮಲತಾ ಕುರಿತು ಕುಮಾರಸ್ವಾಮಿ ಆಡಿರುವ ಮಾತಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕವಾಗಿ ಹಲವು ಬಾರಿ ಈ ರೀತಿ ಮಾತನಾಡಿದ್ದಾರೆ. ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವುದು ಅವರಿಗೆ ಕರಗತವಾಗಿದೆ ಎಂದು ಬೇಸರ ಹೊರ ಹಾಕಿದರು.
ಅಲ್ಲಿ ಕ್ರಷರ್ ನಡೆಯುತ್ತಿದೆ. ಅದು ನಡೆಯಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲಿ ಪೊಲೀಸರನ್ನು ಹಾಕಿದ್ದಾರೆ. ಸರ್ಕಾರಕ್ಕೆ ಇದು ಗೌರವ ತರುತ್ತಾ? ಅದನ್ನ ಕಾವಲು ಕಾಯಬೇಕಾ? ಮಂಡ್ಯ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ. ಕಳೆದ ಒಂದು ತಿಂಗಳಿಂದ ಮಂಡ್ಯದಲ್ಲಿ ಎಲ್ಲ ಪಕ್ಷದವರು ಮತ್ತು ರಾಜ್ಯದ ಎಲ್ಲ ಪಕ್ಷ ಮುಖಂಡರು ಒಂದೇ ಧ್ವನಿಯಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡ್ತೀವಿ ಎಂದು ಹೇಳಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪತ್ರ ಬರೆದಿದ್ರು. ಈಗ ನಾವು ಏನೋ ಮಾಡ್ತಿದ್ದೇವೆ ಅನ್ನೋದನ್ನ ತೋರಿಸಲು ಇಂದು ಸಿಎಂ ಭೇಟಿ ಮಾಡಿದ್ದಾರೆ ಎಂದರು.
ಸಕ್ಕರೆ ಕಾರ್ಖಾನೆ ನಿಂತಿದ್ದು, ಕುಮಾರಸ್ವಾಮಿ ಸಿಎಂ ಆಗಿದ್ದಾಗ. ನಿಲ್ಲಿಸಿದವರೇ ಇವರು ಈಗ ಸಿಎಂ ಜತೆ ಯಾವ ಕಾರಣಕ್ಕೆ ಭೇಟಿ ಮಾಡಿದ್ರೋ ಗೊತ್ತಿಲ್ಲ. ಕುಮಾರಸ್ವಾಮಿ ಅವರೇ ಶುಗರ್ ಕಾರ್ಖಾನೆ ನಿಲ್ಲುವುದಕ್ಕೆ ಕಾರಣ. ನಾನು ಕಾಂಗ್ರೆಸ್ ಸಪೋರ್ಟ್ ಕೊಡಿ ಎಂದು ಕೇಳಿರಲಿಲ್ಲ ಎಂದು ಹೇಳ್ತಾರೆ. ಅದರೆ, ನಮ್ಮಿಂದ ತಾನೇ ಸಿಎಂ ಆಗಿದ್ದು ಎಂದರು.