ದಾವಣಗೆರೆ: ಯಡಿಯೂರಪ್ಪ ಹೆಸರು ಘೋಷಣೆ ಮಾಡದೇ ಇದ್ದರೆ 104 ಸೀಟು ಬರುತ್ತಿರಲಿಲ್ಲ. ಬಿಎಸ್ವೈ ಅವರದ್ದು ಹಿರಿಯ ಜೀವ, ವಾತಾವರಣ ನೋಡಿ ಮನ ನೊಂದಿದ್ದಾರೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಓದಿ: ಪರಸ್ಪರ ಗುಂಡು ಹಾರಿಸಿಕೊಂಡ ಯೋಧರು..ಇಬ್ಬರೂ ಸ್ಥಳದಲ್ಲೇ ಸಾವು
ದಾವಣಗೆರೆಯಲ್ಲಿ ಮಾತನಾಡಿದ ಅವರು, ಪದೇ ಪದೇ ತೊಂದರೆ ಕೊಟ್ಟರೆ ಆಡಳಿತ ವ್ಯವಸ್ಥೆಗೆ ಹಾಗು ಪಕ್ಷಕ್ಕೆ ಕೆಟ್ಟ ಹೆಸರು ಹೋಗುತ್ತೆ. ಬೀದಿ ಬೀದಿಯಲ್ಲಿ ಮರ್ಯಾದೇ ಕೊಡದೇ ಜನ ಕ್ಯಾಕರಿಸಿ ಹುಗಿದು ಮನೆಗೆ ಕಳುಹಿಸುತ್ತಾರೆ. ಇದರ ಬಗ್ಗೆ ಹೈಕಮಾಂಡ್ ಸ್ಪಷ್ಟ ನಿರ್ದೇಶನ ಕೊಡಬೇಕು. ಬೇರೆ ರಾಜ್ಯಗಳಲ್ಲಿ ಸಿಎಂ ಬದಲಾವಣೆ ಇಲ್ಲದ ಚರ್ಚೆ ಇಲ್ಲಿ ಯಾಕೆ, ಸಿಎಂ ಆಗಿ ಬಿಎಸ್ವೈ ಸಂಪೂರ್ಣ ಅವಧಿ ಮುಗಿಸಲು ಅನುಕೂಲ ಮಾಡಿಕೊಡಬೇಕು. ಅವರ ಬದಲಾವಣೆ ದುಸ್ಸಾಹಸ ಮಾಡಬಾರದು ಎಂದು ಮಾಡಾಳು ವಾಗ್ದಾಳಿ ನಡೆಸಿದರು.