ದಾವಣಗೆರೆ:ಅವರಿಬ್ಬರು ಅಕ್ಕ - ತಂಗಿ ಮಕ್ಕಳು, ಸಂಬಂಧದಲ್ಲಿ ಸಹೋದರರಾಗಬೇಕು. ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ತಮ್ಮನೊಬ್ಬ ಕಣ್ಣು ಹಾಕಿದ್ದ ಹುಡುಗಿಯೊಂದಿಗೆ ಅಣ್ಣನಿಗೆ ಮದುವೆ ನಿಶ್ಚಯವಾಗಿತ್ತು. ಈ ಪ್ರಕರಣ ಕೊಲೆಯಲ್ಲಿ ಅಂತ್ಯಗೊಂಡಿದೆ.
ಅವರಿಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ಅಣ್ಣನಿಗೆ ಮದುವೆ ನಿಶ್ಚಯ ಆಗಿದ್ದರಿಂದ ಅಣ್ಣ - ತಮ್ಮ ಇಬ್ಬರು ಶಾಪಿಂಗ್ಗೆ ತೆರಳಿದ್ದಾರೆ. ನಂತರದ ದಿನ ಬೆಳಗಾಗುವುದರಲ್ಲಿ ಒಬ್ಬ ಶವವಾಗಿ ಸಿಕ್ಕರೆ, ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಶಾಂಪಿಂಗ್ಗೆ ಕರೆದುಕೊಂಡು ಬಂದಿದ್ದ ಅಣ್ಣ ಇಬ್ರಾಹಿಂ ಹುಡುಗಿ ವಿಚಾರವಾಗಿ ತಮ್ಮನಾದ ಅಲ್ತಾಫ್‌ನ ಕಥೆ ಮುಗಿಸಿದ್ದಾನೆ.
ಪೊಲೀಸ್ ತನಿಖೆಯಿಂದ ಸತ್ಯ ಬಯಲು:ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹೆಬೂಬ್ ಬಾಷಾ ಅವರ ಮಗ ಅಲ್ತಾಫ್ ಇದೆ ತಿಂಗಳು 19ಕ್ಕೆ ದಾವಣಗೆರೆ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಶವವಾಗಿ ಸಿಕ್ಕಿದ್ದನು. ಆಗಲೇ ಅದು ಕೊಲೆ ಎಂದು ದೃಢಪಟ್ಟಿದ್ದು, ಸ್ವತಃ ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಸತ್ಯ ಹೊರಬಂದಿದೆ.
ನಿಜವಾಗಿ ನಡೆದಿದ್ದೇನು?:ಅಣ್ಣ ಇಬ್ರಾಹಿಂ ಮದುವೆ ನಿಶ್ಚಿಯವಾಗಿದ್ದ ಹುಡುಗಿಯ ಮೇಲೆ ತಮ್ಮ ಅಲ್ತಾಫ್ ಕಣ್ಣು ಹಾಕಿದ್ದನಂತೆ. ಇದನ್ನು ಸಹಿಸಿಕೊಳ್ಳದ ಅಣ್ಣ ಇಬ್ರಾಹಿಂ ಇದೇ ತಿಂಗಳು 18ಕ್ಕೆ ಅಲ್ತಾಫ್ನನ್ನು ಶಾಪಿಂಗ್ಗೆ ಕರೆದುಕೊಂಡು ಬಂದು, ಕತ್ತು ಸೀಳಿ ಕೊಲೆ ಮಾಡಿ, ಕಾಲ್ಕಿತ್ತಿದ್ದಾನೆ.