ದಾವಣಗೆರೆ: ಕೊರೊನಾ ಭೀತಿ ನಡುವೆಯೂ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಬೀದಿ ಬೀದಿಗಳಲ್ಲಿ ಗಣಪನ ಮೂರ್ತಿ ಕೂರಿಸದಿರುವುದರಿಂದ ಹಬ್ಬ ಕಳೆಗುಂದಿದೆ. ಮನೆ ಮನೆಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪಿಸುವತ್ತ ಜನರು ಮನಸು ಮಾಡಿದ್ದಾರೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ, ದಾವಣಗೆರೆಯಲ್ಲಿ ಕಳೆಗುಂದಿದ ಹಬ್ಬ - ಹೂವು, ಹಣ್ಣಿನ ದರ ದುಬಾರಿ
ಪ್ರತಿ ವರ್ಷದಂತೆ ಈ ಬಾರಿ ಸಂಭ್ರಮ, ಸಡಗರ ಕಂಡು ಬರುತ್ತಿಲ್ಲ. ಶುಕ್ರವಾರ, ಶನಿವಾರ ಹೆಚ್ಚಿನ ಜನಸಂದಣಿ ಮಾರುಕಟ್ಟೆಗಳಲ್ಲಿ ಕಂಡು ಬರಲಿಲ್ಲ. ಹೂವು, ಹಣ್ಣಿನ ದರ ದುಬಾರಿಯಾಗಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಸೇವಂತಿಗೆ, ಚೆಂಡು, ಗುಲಾಬಿ ಸೇರಿದಂತೆ ಎಲ್ಲಾ ಹೂವುಗಳ ರೇಟ್ ಮೂರು ಪಟ್ಟು ಹೆಚ್ಚಾಗಿದೆ.

ದೊಡ್ಡ ದೊಡ್ಡ ಗಣಪನ ಮೂರ್ತಿ ಖರೀದಿಗೆ ಜನರು ಆಸಕ್ತಿ ವಹಿಸುತ್ತಿಲ್ಲ. ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ರೂಪಾಯಿಯ ಗಣಪನ ಮೂರ್ತಿಗೆ ಬೇಡಿಕೆ ಹೆಚ್ಚಿದೆ. ಬೆಳಗ್ಗೆಯಿಂದಲೇ ಜನರು ಬಾಳೆಕಂದು, ತರಕಾರಿ, ಹೂವು, ಹಣ್ಣು ಖರೀದಿಗೆ ಆಗಮಿಸಿದರೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ಸಾಹ ಕಂಡು ಬರಲಿಲ್ಲ.