ಕರ್ನಾಟಕ

karnataka

ETV Bharat / city

ಶಾಸಕಿ ಪೂರ್ಣಿಮಾರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಯಾದವ ಸಮಾಜದಿಂದ ರಕ್ತ ಪತ್ರ ಚಳವಳಿ - ಯಾದವ ಸಮಾಜದಿಂದ ರಕ್ತ ಪತ್ರ ಚಳುವಳಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಯಾದವ (ಗೊಲ್ಲ ಸಮಾಜ) ಸಮುದಾಯದ ರಾಜ್ಯದ ಏಕೈಕ ಶಾಸಕಿ. ಅವರು ಚುನಾಯಿತರಾಗುವ ಮೊದಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರು ಸಚಿವರಾಗಿ ಆಯ್ಕೆ ಮಾಡುತ್ತೇವೆ, ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಇಡೀ ಗೊಲ್ಲ ಸಮಾಜಕ್ಕೆ ಕರೆ ನೀಡಿದ್ದರು..

Blood Letter to govt from davanagere Yadava Society
ಯಾದವ ಸಮಾಜದಿಂದ ರಕ್ತ ಪತ್ರ ಚಳುವಳಿ

By

Published : Feb 5, 2022, 4:50 PM IST

Updated : Feb 5, 2022, 5:07 PM IST

ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ದಾವಣಗೆರೆಯಲ್ಲಿ ಯಾದವ ಸಮಾಜದಿಂದ ರಕ್ತ ಪತ್ರ ಚಳವಳಿ ನಡೆಸಲಾಯಿತು.

ಗೊಲ್ಲ ಸಮಾಜದಿಂದ ರಕ್ತ ಪತ್ರ ಚಳವಳಿಯನ್ನು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನ ಹಾಗೂ ಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ರಕ್ತ ಪತ್ರ ಬರೆಯಲಾಯಿತು. ‌

ಯಾದವ ಸಮಾಜದಿಂದ ರಕ್ತ ಪತ್ರ ಚಳುವಳಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಯಾದವ (ಗೊಲ್ಲ ಸಮಾಜ) ಸಮುದಾಯದ ರಾಜ್ಯದ ಏಕೈಕ ಶಾಸಕಿ. ಅವರು ಚುನಾಯಿತರಾಗುವ ಮೊದಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರು ಸಚಿವರಾಗಿ ಆಯ್ಕೆ ಮಾಡುತ್ತೇವೆ, ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಇಡೀ ಗೊಲ್ಲ ಸಮಾಜಕ್ಕೆ ಕರೆ ನೀಡಿದ್ದರು.

ಇದನ್ನೂ ಓದಿ:ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಅಗತ್ಯವಿಲ್ಲ : ಸಚಿವ ಹಾಲಪ್ಪಆಚಾರ್

ಆದ್ರೆ, ಆ ಮಾತನ್ನು ಬಿಎಸ್​ವೈ ಉಳಿಸಿಕೊಳ್ಳಲಿಲ್ಲ ಎಂದು ರಕ್ತಪತ್ರ ಚಳವಳಿ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ಇಡೀ ಸಮಾಜಕ್ಕೆ ಎಸ್ಟಿ ಮೀಸಲಾತಿ ಘೋಷಿಸುವಂತೆ ಯಾದವ ಸಮಾಜದ ಮುಖಂಡ ಬಾಡದ ಆನಂದರಾಜ್ ಸರ್ಕಾರಕ್ಕೆ ಒತ್ತಾಯಿಸಿದರು.

Last Updated : Feb 5, 2022, 5:07 PM IST

ABOUT THE AUTHOR

...view details