ದಾವಣಗೆರೆ:ಕೊರೊನಾ ಮಹಾಮಾರಿಯ ಮುಂದುವರೆದ ಭಾಗವಾಗಿರುವ ಬ್ಲ್ಯಾಕ್ ಫಂಗಸ್ ವೈರಸ್ ಬೆಣ್ಣೆನಗರಿಗೂ ಕಾಲಿಟ್ಟಿದ್ದು, ಜಿಲ್ಲೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ.
ನಗರದ ಬಾಪೂಜಿ ಖಾಸಗಿ ಆಸ್ಪತ್ರೆಯಲ್ಲಿ 4, ಎಸ್.ಎಸ್.ಖಾಸಗಿ ಆಸ್ಪತ್ರೆ 1, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 1 ಪ್ರಕರಣ ಕಂಡುಬಂದಿದೆ. ಸೋಮವಾರ ಕೊರೊನಾ ರೋಗಿಗಳಿಗೆ ಪರೀಕ್ಷೆ ಮಾಡಿಸಿದಾಗ ರೋಗ ತಗುಲಿರುವುದು ದೃಢಪಟ್ಟಿದೆ. ಇದರಿಂದ ಉಳಿದ ರೋಗಿಗಳು ಆತಂಕಕ್ಕೀಡಾಗಿದ್ದಾರೆ.