ದಾವಣಗೆರೆ: ಮೊಬೈಲ್ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅದರಲ್ಲೂ ಯುವಕರಲ್ಲಂತೂ ಹೊಸ ಕ್ರೇಜ್ ಹುಟ್ಟು ಹಾಕಿದೆ. ಗ್ರಾಹಕರನ್ನು ತನ್ನತ್ತ ಸೆಳೆಯುವ ಹೊಸ ಹೊಸ ಯೋಜನೆಗಳನ್ನು ಮೊಬೈಲ್ ಕಂಪನಿಗಳು ಮಾಡಲಾರಂಭಿಸಿದ್ದು, ನಗರದ ಸಂಗೀತಾ ಮೊಬೈಲ್ ಶಾಪ್ ಕೂಡ ಗ್ರಾಹಕರಿಗೆ ಬಿಗ್ ಆಫರ್ ಕೊಟ್ಟಿದೆ.
ಭಾರಿ ಆಫರ್: ತಾ ಮುಂದು,ನಾ ಮುಂದು ಎಂದು ಮುಗಿ ಬಿದ್ದ ದಾವಣಗೆರೆ ಮಂದಿ! - undefined
ದಾವಣಗೆರೆ ನಗರದ ಸಂಗೀತಾ ಮೊಬೈಲ್ ಶಾಪ್ ಗ್ರಾಹಕರಿಗೆ ಬಿಗ್ ಆಫರ್ ನೀಡಿದ್ದು, ಮೊಬೈಲ್ ಕೊಳ್ಳಲು ಜನ ತಾ ಮುಂದು ನಾ ಮುಂದು ಎಂದು ಅಂಗಡಿಗೆ ಮುಗಿಬಿದ್ದಿದ್ದಾರೆ.

ತಾ ಮುಂದು ನಾ ಮುಂದು ಎಂದು ಅಂಗಡಿಗೆ ಮುಗಿ ಬಿದ್ದ ಜನ
ಮೊಬೈಲ್ ಶಾಪ್ ಮುಂದೆ ಮುಗಿಬಿದ್ದ ಜನ
ದಾವಣಗೆರೆ ನಗರದ ಸಂಗೀತಾ ಮೊಬೈಲ್ ಶಾಪ್ನಲ್ಲಿ 200 ರೂಪಾಯಿಗೆ ಒಪೆಲ್ ಕಂಪನಿಯ ಹೊಸ ಸೆಟ್ ನೀಡಲಾಗುತ್ತಿದೆ. ವಿಶೇಷ ಅಂದ್ರೆ, 100 ಮೊಬೈಲ್ಗಳಿಗೆ ಮಾತ್ರ ಆಫರ್ ಸೀಮಿತಗೊಳಿಸಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಜನ ತಾ ಮುಂದು ನಾ ಮುಂದು ಎಂದು ಅಂಗಡಿಗೆ ಮುಗಿಬಿದ್ದಿದ್ದಾರೆ. ಸಾಲಿನಲ್ಲಿ ನಿಂತು ಮೊಬೈಲ್ ಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿದೆ.
ಮೊಬೈಲ್ ಪಡೆದುಕೊಂಡ ಕೆಲವರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮೊಬೈಲ್ ಸಿಗದಿದ್ದಕ್ಕೆ ನಿರಾಸೆ ವ್ಯಕ್ತಪಡಿಸಿದರು.