ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದು, ದಾವಣಗೆರೆಯಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ದಾವಣಗೆರೆಯಲ್ಲಿ ಬಾರಕೋಲು ಚಳವಳಿ ದಾವಣಗೆರೆಯ ರಾಣಿ ಚನ್ನಮ್ಮ ಸರ್ಕಲ್ನಿಂದ ಬಾರಕೋಲು ಚಳವಳಿ ಆರಂಭಿಸಲಾಗಿದ್ದು, ಜಯ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಬಾರಕೋಲು ಚಳವಳಿಗೆ ಚಾಲನೆ ನೀಡಲಾಯಿತು.
ಬೀದಿಗಿಳಿದು ಪಾದಯಾತ್ರೆ ಮಾಡಿದ್ರು ಕೂಡ ಸಿಎಂ 2 ಎ ಮೀಸಲಾತಿ ನೀಡುತ್ತಿಲ್ಲ, ಇಷ್ಟು ದಿನ ಶಾಂತಿಯುತವಾಗಿ ಹೋರಾಟ ಮಾಡಲಾಗಿತ್ತು. ಇನ್ನುಮುಂದೆ ಕ್ರಾಂತಿಯುತ ಹೋರಾಟ ನಡೆಸುವ ಮೂಲಕ ಸಿಎಂಗೆ ಎಚ್ಚರಿಕೆ ನೀಡುವುದಾಗಿ ಶ್ರೀಗಳು ತಿಳಿಸಿದರು.
ಇಂದು ದಾವಣಗೆರೆಯಿಂದ ಬೆಂಗಳೂರಿಗೆ ಇಬ್ಬರು ಶ್ರೀಗಳ ಸಮ್ಮುಖದಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಶಾಂತಿಯುತ ಹೋರಾಟ ನಡೆಸಿದರೆ ಏನೂ ಪ್ರಯೋಜನವಿಲ್ಲ ಎಂದು ಮನಗಂಡು ಬಾರಕೋಲು ಚಳುವಳಿಗೆ ಶ್ರೀಗಳು ನಾಂದಿ ಹಾಡಿದರು.