ದಾವಣಗೆರೆ: ಕಳಪೆ ರಸಗೊಬ್ಬರದಿಂದ ಸಾಕಷ್ಟು ರೈತರು ಮೋಸ ಹೋಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಕಳೆದುಕೊಂಡಿರುವ ಅನೇಕ ಉದಾಹರಣೆಗಳಿವೆ. ಜಿಲ್ಲೆಯಲ್ಲೂ ಸಹ ಈ ರೀತಿಯ ಘಟನೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.
ವಿವರ:
ಮೈಸೂರು ಮೂಲದ ಗೊಬ್ಬರದ ಕಂಪನಿಯೊಂದು ಇಂಡಿಯನ್ ಐಪಿಎಲ್ ಪೊಟ್ಯಾಷಿಯಂ ಎಂಬ ಹೆಸರಿನ ಗೊಬ್ಬರವನ್ನು ದಾವಣಗೆರೆಯ ವಿನೂತ ಅಗ್ರೋ ಏಜೆನ್ಸಿ ಮುಖೇನ ರೈತರಿಗೆ ಮಾರಾಟ ಮಾಡಲು ಯತ್ನಿಸಿದೆ. ಅಡಿಕೆ ಗಿಡಗಳಿಗೆ ಶೀತ ಹೆಚ್ಚಾಗಿದ್ದರಿಂದ ಈ ಗೊಬ್ಬರ ಖರೀದಿಸಲು ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆಯ ರೈತ ಪರಮೇಶ್ವರಪ್ಪ ಮುಂದಾಗಿದ್ದಾರೆ. ಆದರೆ, ಅವರು ಖರೀದಿಗೂ ಮೊದಲು ಪರಿಶೀಲನೆ ನಡೆಸಿದಾಗ ಗೊಬ್ಬರ ಕಳಪೆಯಿಂದ ಕೂಡಿದೆ ಎಂದು ತಿಳಿದು ಬಂದಿದೆ. ಕೂಡಲೇ ಈ ವಿಚಾರವನ್ನು ಮೈಸೂರಿನಿಂದ ಗೊಬ್ಬರದ ಸಮೇತ ಬಂದಿದ್ದ ಲಾರಿಯನ್ನು ತಡೆದು ನಿಲ್ಲಿಸಿ, ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.