ದಾವಣಗೆರೆ: ದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ದಾವಣಗೆರೆಯ ಕುಸ್ತಿ ಪಟು ಅರ್ಜುನ್ ಹಲಕುರ್ಕಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಕನ್ನಡಿಗನ ಸಾಧನೆ: ಅರ್ಜುನ್ ಹಲಕುರ್ಕಿಗೆ ಕಂಚು - Arjun halkurki won the bronze medal in Asia wrestle championship
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ದಾವಣಗೆರೆಯ ಕುಸ್ತಿ ಪಟು ಅರ್ಜುನ್ ಹಲಕುರ್ಕಿ ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಕಂಚು ಗೆದ್ದ ಅರ್ಜುನ್ ಹಲಕುರ್ಕಿ
ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕೋರಿಯಾ ಪೌಲ್ ವಿರುದ್ಧ 7-4 ಅಂತರದಲ್ಲಿ ಅರ್ಜುನ್ ಗೆಲುವು ಸಾಧಿಸಿದ್ದಾರೆ. ಸೆಮಿಫೈನಲ್ಸ್ನಲ್ಲಿ ಇರಾನ್ ಕುಸ್ತಿ ಪಟುವಿನ ಎದುರು 7-8 ಅಂತರದಿಂದ ಅರ್ಜುನ್ ಸೋಲು ಕಂಡಿದ್ದರು.
ಕಳೆದ ಎಂಟು ವರ್ಷಗಳಿಂದ ದಾವಣಗೆರೆ ಕ್ರೀಡಾ ವಸತಿ ನಿಲಯದಲ್ಲಿರುವ ಅರ್ಜುನ್ ಅವರು ಮೂಲತಃ ಬಾಗಲಕೋಟೆಯ ಹಲಕುರ್ಕಿ ಗ್ರಾಮದವರು.