ಕರ್ನಾಟಕ

karnataka

ETV Bharat / city

ಮತ್ತೆ ಪ್ರತಿಧ್ವನಿಸುತ್ತಿದೆ ದೂಡಾ ನಿವೇಶನಗಳ ಹಂಚಿಕೆಯಲ್ಲಿನ ಭ್ರಷ್ಟಾಚಾರ ಆರೋಪ - davanagere latest news

ಸೂರು ರಹಿತರಿಗೆ ಸೇರಬೇಕಾಗಿದ್ದ 103 ಸೈಟುಗಳು, ಜನಪ್ರತಿನಿಧಿಗಳ, ಪ್ರಭಾವಿಗಳ ಪಾಲಾಗಿದ್ದವು. ಇದಕ್ಕೆ ಅಂದಿನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷರಾಗಿದ್ದ ರಾಮಚಂದ್ರಪ್ಪರಿಂದ ಅಕ್ರಮಕ್ಕೆ ಕುಮ್ಮಕ್ಕು ಇತ್ತು ಎಂಬುದು ಶ್ರೀರಾಮ ಸೇನೆ ಮುಖಂಡರ ಆರೋಪವಾಗಿದೆ.

allegation as Corruption in allocation of Duda sites
ಮತ್ತೆ ಪ್ರತಿಧ್ವನಿಸುತ್ತಿದೆ ದೂಡಾ ನಿವೇಶನಗಳ ಹಂಚಿಕೆಯಲ್ಲಿನ ಭ್ರಷ್ಟಾಚಾರ ಆರೋಪ!

By

Published : Oct 7, 2021, 5:16 PM IST

ದಾವಣಗೆರೆ: ದಾವಣಗೆರೆ ಹರಿಹರ ನಗರಾಭಿವೃದ್ದಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದೆ ಎಂಬ ಆರೋಪ ಇದೀಗ ಮತ್ತೆ ಪ್ರತಿಧ್ವನಿಸುತ್ತಿದೆ.

ಈ ಹಿಂದೆ ನಗರದ ಜೆ ಎಚ್ ಪಟೇಲ್ ಬಡಾವಣೆಯಲ್ಲಿ ಬಡವರಿಗೆ ಸೈಟ್ ಹಂಚಿಕೆ‌ ಮಾಡ್ತೇವೆ ಅಂತ ಅರ್ಜಿ ಕರೆಯಲಾಗಿತ್ತು. ಸಾವಿರಾರು ಬಡವರು ಅರ್ಜಿಗಳನ್ನು ಹಾಕಿದ್ರು. ಸೈಟ್ ಹಂಚಿಕೆಯಾದ ಸಮಯದಲ್ಲಿ ಸುಳ್ಳು ದಾಖಲೆ ನೀಡಿ ತಮ್ಮ ಹೆಸರಿಗೆ ಹಾಗೂ ತಮ್ಮ ಕುಟುಂಬದವರ ಹೆಸರಿನಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅವರ ಹಿಂಬಾಲಕರು ಬೇಕಾಬಿಟ್ಟಿ ಸೈಟ್‌ಗಳನ್ನು ಪಡೆದಿದ್ರು. ಇದಕ್ಕೆ ಸಂಬಂಧಿದಂತೆ ಈಗಾಗಲೇ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಹಾಲಿ ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ ಬಸವರಾಜ ನಾಯ್ಕ್‌ ಸೇರಿ ಅವರ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತೆ ಪ್ರತಿಧ್ವನಿಸುತ್ತಿದೆ ದೂಡಾ ನಿವೇಶನಗಳ ಹಂಚಿಕೆಯಲ್ಲಿನ ಭ್ರಷ್ಟಾಚಾರ ಆರೋಪ!

ಇದಾದ ಎರಡನೇ ಅವಧಿಯಲ್ಲಿ ಅಂದ್ರೆ 2017ರಲ್ಲಿ ಹಂಚಿಕೆಯಾದ ಸೈಟ್​ನಲ್ಲೂ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪವಿದೆ. ಇದೇ ಸಂದರ್ಭದಲ್ಲಿ ಕಾರ್ಪೊರೇಟರ್ ಆಗಿದ್ದ ದೇವರಮನೆ ಶಿವಕುಮಾರ್‌, ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಲ್ಲಿ ನಾಲ್ಕಕ್ಕೂ ಹೆಚ್ಚು ನಿವೇಶನ ಪಡೆದಿದ್ರು. ಆಗ ದೂಡಾ ಅಧ್ಯಕ್ಷರಾಗಿದ್ದ ರಾಜನಹಳ್ಳಿ ಶಿವಕುಮಾರ್, ಈ ಬಗ್ಗೆ ಧ್ವನಿ ಎತ್ತಿ ಕೋಟಿ ಕೋಟಿ ಹಣ ಇದ್ದರೂ ಸೈಟ್ ಪಡೆದಿದ್ದಾರೆ ಎಂದು ದೇವರಮನೆ ಶಿವಕುಮಾರ್ ಮೇಲೆ ಗಂಭೀರ ಆರೋಪ‌ ಮಾಡಿದ್ದರು. ಈ ಆರೋಪ ಹಿನ್ನೆಲೆಯೋ ಅಥವಾ ಕಾಂಗ್ರೆಸ್ ಕಿತ್ತಾಟದಿಂದಲೋ ಹೊರ ಬಂದ ದೇವರಮನೆ ಶಿವಕುಮಾರ್ ತಮ್ಮ ಕಾರ್ಪೊರೇಟರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ರು.

'ಕಳ್ಳನ ಕೈಗೆ ಬೀಗ ಕೊಟ್ಟಂತಾಗಿದೆ'

ಇದೀಗ ಇದೇ ದೇವರಮನೆ ಶಿವಕುಮಾರ್ ದೂಡಾ ಅಧ್ಯಕ್ಷರಾಗಿದ್ದು, ಒಂದರ್ಥದಲ್ಲಿ ಕಳ್ಳನ ಕೈಗೆ ಬೀಗ ಕೊಟ್ಟಂತಾಗಿದೆ ಎಂದು ದಾಖಲೆ ಸಮೇತ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ‌ ಮಾಡಿ, ದೇವರಮನೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ದೂಡಾದಿಂದ 2011 ಹಾಗೂ 2017ರಲ್ಲಿ ಸೈಟ್ ಹಂಚಿಕೆಯಲ್ಲಿ‌ ಆದ ಹಗರಣ ಈಗ ಮತ್ತೆ ಪ್ರತಿಧ್ವನಿಸುತ್ತಿದೆ. ಸೂರು ರಹಿತರಿಗೆ ಸೇರಬೇಕಾಗಿದ್ದ 103 ಸೈಟುಗಳು, ಜನಪ್ರತಿನಿಧಿಗಳ, ಪ್ರಭಾವಿಗಳ ಪಾಲಾಗಿದ್ದವು. ಇದಕ್ಕೆ ಅಂದಿನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷರಾಗಿದ್ದ ರಾಮಚಂದ್ರಪ್ಪರಿಂದ ಅಕ್ರಮಕ್ಕೆ ಕುಮ್ಮಕ್ಕು ಇತ್ತು ಎಂಬುದು ಶ್ರೀರಾಮ ಸೇನೆ ಮುಖಂಡರ ಆರೋಪ. ಪ್ರಸ್ತುತ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಶ್ಯಾಗಲಿ ನಾಗಪ್ಪ, ಹಲವಾರು ಶ್ರೀಮಂತರು, ಪತ್ರಕರ್ತರ ಹೆಸರುಗಳು ಕೂಡ ಈ ಹಗರಣದಲ್ಲಿ ತಳುಕು ಹಾಕಿಕೊಂಡಿವೆ.

ಮೊದಲ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದರಲ್ಲಿ ಭಾಗಿಯಾದ ಇನ್ನೂ ಹಲವರ ವಿರುದ್ಧ ಎರಡನೇ ಹಂತದಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿವೆ.

ಇದನ್ನೂ ಓದಿ:ಹೆದ್ದಾರಿ ಮೂಲಕ ಚಾಮರಾಜನಗರ ಆಸ್ಪತ್ರೆಗೆ ಬಂದ ಸಿಎಂ; ಜಿಲ್ಲಾಕೇಂದ್ರಕ್ಕೆ ಬಂದೂ ಬಾರದಂತಾದ ಬೊಮ್ಮಾಯಿ!

ಈ ಆರೋಪ ತಳ್ಳಿ ಹಾಕಿರುವ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಆ ಸಮಯದಲ್ಲಿ ನನ್ನ ಬಳಿ ಯಾವುದೇ ಸೈಟ್, ಕೋಟಿ ಕೋಟಿ ಹಣ ಇರಲಿಲ್ಲ ಎಂದು ಹೇಳಿದ್ದಾರೆ. ಬೇಕಾದರೆ ದೇವರ ಮೇಲೆ ಪ್ರಮಾಣ ಮಾಡೋಣ ಬನ್ನಿ ಎಂದು ಸವಾಲು ಹಾಕಿದ್ದಾರೆ.

ABOUT THE AUTHOR

...view details