ಕರ್ನಾಟಕ

karnataka

ETV Bharat / city

ವೀರಶೈವರ ಮತಾಂತರ: ಜಾಗೃತಿ ಪತ್ರ ಹೊರಡಿಸಿದ ಅಖಿಲ ಭಾರತ ವೀರಶೈವ ಮಹಾಸಭಾ - All India Veerashaiva Mahasabha Religious conversion letter

ಮತಾಂತರದ ಬಗ್ಗೆ ಎಚ್ಚೆತ್ತುಕೊಂಡಿರುವ ಅಖಿಲ ಭಾರತ ವೀರಶೈವ ಮಹಾಸಭಾ (All India Veerashaiva Mahasabha) ಜಾಗೃತಿ ಪತ್ರ ಬರೆದಿದೆ.

all-india-veerashaiva-mahasabha-religious-conversion-awareness-letter
ಅಖಿಲ ಭಾರತ ವೀರಶೈವ ಮಹಾಸಭಾ

By

Published : Nov 21, 2021, 9:58 AM IST

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ (All India Veerashaiva Mahasabha) ಮತಾಂತರದ ಬಗ್ಗೆ ಎಚ್ಚೆತ್ತುಕೊಂಡಿದೆ.

ವೀರಶೈವರ ಮತಾಂತರ ತಡೆಯಲು ಮಹಾಸಭಾ ಸಿದ್ಧವಾಗಿದ್ದು, ಅನ್ಯ ಧರ್ಮಗಳಿಗೆ ಮತಾಂತರವಾಗದಂತೆ ಜನರಿಗೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಜಾಗೃತಿ ಪತ್ರ ಬರೆದಿದ್ದಾರೆ.

ಜಾಗೃತಿ ಪತ್ರ

ವೀರಶೈವರ ಮತಾಂತರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಮತಾಂತರ ಸುಳಿಗೆ ಸಿಲುಕಿದವರನ್ನು ಮರಳಿ ಕರೆತರುವ ಕಾರ್ಯಕ್ಕೆ ಮಹಾಸಭಾ ಮುಂದಾಗಿದೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತಾಂತರ ಆಗಿರುವ ಬಗ್ಗೆ ನಮಗೂ ಅನುಮಾನವಿದೆ. ಮತಾಂತರ ನಡೆಯದಂತೆ ಕ್ರಮಕ್ಕೆ ಹಾಗೂ ಮತಾಂತರ ನಡೆದಿದ್ದರೆ ಮಾಹಿತಿ ನೀಡುವಂತೆ ‌ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ

ಮತಾಂತರವಾಗಿದ್ದರೆ ಮಹಾಸಭಾದಿಂದ ಸರಿಪಡಿಸುತ್ತೇವೆ. ಆರ್ಥಿಕವಾಗಿ ದುರ್ಬಲರಾಗಿದ್ರೆ ಸಹಾಯ ಮಾಡುತ್ತೇವೆ. ಎಲ್ಲಿಯೂ ವೀರಶೈವರ ಮತಾಂತರ ಆಗಿಲ್ಲ ಎಂಬ ಮಾಹಿತಿ ಇದೆ. ಅಕಸ್ಮಾತ್‌ ಮತಾಂತರ ಆಗುತ್ತಿದ್ರೆ, ಅವರನ್ನು ವಾಪಸ್ ಕರೆಸಿಕೊಳ್ಳುವ ಕುರಿತಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details