ಕರ್ನಾಟಕ

karnataka

ETV Bharat / city

ಯತ್ನಾಳ್ ಭಾವಚಿತ್ರಕ್ಕೆ ಸಗಣಿ ಎರಚಿ, ಚಪ್ಪಲಿ ಸೇವೆ ಮಾಡಿದ ಕನ್ನಡ ಪರ ಹೋರಾಟಗಾರರು - ಶಾಸಕ ಬಸನಗೌಡ ಪಾಟೀಲ ಯತ್ನಾಳ್

ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ದುಡಿಯುವವರಿಗೆ ಈ ರೀತಿ ಕೀಳಾಗಿ ಮಾತನಾಡಬಾರದು. ಇಂತಹ ವರ್ತನೆ ಶಾಸಕರಾದ ಯತ್ನಾಳ್ ಅವರಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು..

ಕರ್ನಾಟಕ ರಕ್ಷಣಾ ವೇದಿಕೆ
ಕರ್ನಾಟಕ ರಕ್ಷಣಾ ವೇದಿಕೆ

By

Published : Dec 5, 2020, 12:47 PM IST

ದಾವಣಗೆರೆ: ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಯದೇವ ವೃತ್ತದಲ್ಲಿ ಯತ್ನಾಳ್ ಭಾವಚಿತ್ರಕ್ಕೆ ವೇದಿಕೆಯ ಕಾರ್ಯಕರ್ತೆಯರು ಸಗಣಿ ಹಚ್ಚಿ, ಚಪ್ಪಲಿಯಿಂದ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದ ಕನ್ನಡ ಪರ ಹೋರಾಟಗಾರರಿಗೆ "ರೋಲ್ ಕಾಲ್'' ಹೋರಾಟಗಾರರು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಕನ್ನಡ ಭಾಷೆ, ನಾಡು, ನುಡಿ ಬಗ್ಗೆ ದುಡಿಯುವವರಿಗೆ ಈ ರೀತಿ ಕೀಳಾಗಿ ಮಾತನಾಡಬಾರದು. ಇಂತಹ ವರ್ತನೆ ಶಾಸಕರಾದ ಯತ್ನಾಳ್ ಅವರಿಗೆ ಶೋಭೆ ತರುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಸಹ ಕನ್ನಡಪರ ಹೋರಾಟಗಾರರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಈ ಇಬ್ಬರು ನಾಯಕರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕರ್ನಾಟಕ ಬಂದ್ ಕರೆಗೆ ಯತ್ನಾಳ್​​ ವಿರೋಧ

ABOUT THE AUTHOR

...view details