ದಾವಣಗೆರೆ: ವ್ಯಕ್ತಿಯೋರ್ವ ಬೈಕ್‌ನಲ್ಲಿ ಹಳ್ಳ ದಾಟುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಚನ್ನಗಿರಿ ತಾಲೂಕಿನ ಚಿರಡೋಣಿ ಹಾಗೂ ದೊಡ್ಡಗಟ್ಟ ಮಧ್ಯಭಾಗ ಹರಿಯುವ ಹಳ್ಳದಲ್ಲಿ ಘಟನೆ ಜರುಗಿದೆ.
ಕುಳಗಟ್ಟ ಗ್ರಾಮದ ನಿವಾಸಿ, ಕೂಲಿ ಕಾರ್ಮಿಕ ಸಿ. ಶಿವರಾಜ್ (26) ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸೂಳೆಕೆರೆ ಕೋಡಿ ಬಿದ್ದಿದ್ದು ಚಿರಡೋಣಿ ಹಾಗು ದೊಡ್ಡಗಟ್ಟದ ಹಳ್ಳ ತುಂಬಿ ಹರಿಯುತ್ತಿದೆ.