ಕರ್ನಾಟಕ

karnataka

ETV Bharat / city

ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ

ನಕಲಿ ಬಂಗಾರ (duplicate gold) ಮಾರಾಟ ಮಾಡುತ್ತಿದ್ದ 5 ಆರೋಪಿಗಳನ್ನು ಸಿಇಎನ್ ಅಪರಾಧ ಠಾಣೆ ಪೊಲೀಸರು (davanagere CEN police station) ಬಂಧಿಸಿದ್ದಾರೆ.

5 are arrested under duplicate gold selling case at davanagere
ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ 5 ಜನ ಆರೋಪಿಗಳ ಬಂಧನ

By

Published : Nov 13, 2021, 8:51 AM IST

ದಾವಣಗೆರೆ: ಜಿಲ್ಲೆಯಲ್ಲಿ ಅಸಲಿ ಚಿನ್ನ(The original gold) ಎಂದು ನಂಬಿ ನಕಲಿ ಚಿನ್ನ( duplicate gold) ಪಡೆದು ಸಾಕಷ್ಟು ಜನ ಮೋಸ ಹೋಗುತ್ತಿರುವ ಪ್ರಕರಣಗಳು(duplicate gold selling case) ಹೆಚ್ಚಾಗುತ್ತಿವೆ. ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ದಾವಣಗೆರೆ ಪೊಲೀಸರು (Davanagere police) ಬಂಧಿಸಿದ್ದಾರೆ.

ನಕಲಿ ಬಂಗಾರ ಮಾರಾಟ ಪ್ರಕರಣ

ಬಂಧಿತರಿಂದ 3 ಕೆ.ಜಿ 422 ಗ್ರಾಂ ನಕಲಿ ಬಂಗಾರ ವಶಕ್ಕೆ ಪಡೆಯಲಾಗಿದೆ. ನಗರದ ಜೆಹೆಚ್ ಪಟೇಲ್ ಬಡಾವಣೆಯ ಸ್ಟೇಡಿಯಂ ಬಳಿ ನಕಲಿ ಬಂಗಾರ ಮಾರಾಟ ಯತ್ನ ಸಿಇಎನ್ ಪೊಲೀಸರ(Davanagere CEN police) ದಾಳಿಯಿಂದ ವಿಫಲಗೊಂಡಿದೆ.

ಇದನ್ನೂ ಓದಿ:ಪಾಠ ಕೇಳುವುದಕ್ಕಿಂತ ಮೊಬೈಲ್​ನಲ್ಲಿಯೇ ಮಗ್ನ..250ಕ್ಕೂ ಹೆಚ್ಚು ಫೋನ್ ವಶಕ್ಕೆ ಪಡೆದು ಬಿಸಿ ಮುಟ್ಟಿಸಿದ ಶಿಕ್ಷಕರು

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಅಪರಾಧ ಠಾಣೆ ಪೊಲೀಸರು ಐದು ಜನರನ್ನು ಬಂಧಿಸಿದ್ದು, 3 ಕೆ.ಜಿ 422 ಗ್ರಾಂ ನಕಲಿ ಬಂಗಾರ, 1 ಕಾರು, 1 ಬೈಕ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆ (CEN police station) ಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details