ದಾವಣಗೆರೆ:ದಾವಣಗೆರೆಯ ಸರ್ಕಾರಿ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಶಾಲೆಯ ಪ್ರಾಚಾರ್ಯ ಸೇರಿ ಒಟ್ಟು 32 ಮಕ್ಕಳಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಆರರಿಂದ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸೋಂಕು ತಗುಲಿದ್ದು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಗೆ ಕೊರೊನಾ ಕಂಟಕವಾಗಿ ಪರಿಣಮಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ಬಳಿ ಇರುವ ಸರ್ಕಾರಿ ವಸತಿ ಶಾಲೆಯ ಮಕ್ಕಳಿ ಸೋಂಕು ತಗುಲಿದ್ದು, ಸೋಂಕಿನ ಲಕ್ಷಣ ಇರುವ ನಾಲ್ವರು ಮಕ್ಕಳಿಗೆ ಚನ್ನಗಿರಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಉಳಿದವರಿಗೆ ಶಾಲೆಯಲ್ಲಿಯೇ ಇರಿಸಿ ತಾಲೂಕು ಆಡಳಿತ ಸೂಕ್ತ ಚಿಕಿತ್ಸೆ ಒದಗಿಸುತ್ತಿದೆ. ಉಳಿದ ಮಕ್ಕಳಿಗೆ ವರ್ಷ ವೈದ್ಯರ ತಂಡ ಕೋವಿಡ್ ಪರೀಕ್ಷೆ ನಡೆಸುತ್ತಿದ್ದಾರೆ.