ಕರ್ನಾಟಕ

karnataka

ಆಕಸ್ಮಿಕ ಬೆಂಕಿ: 300 ಕ್ವಿಂಟಲ್ ಮೆಕ್ಕೆಜೋಳ ಬೆಂಕಿಗಾಹುತಿ

By

Published : Feb 3, 2021, 12:55 PM IST

13 ಎಕರೆಯಲ್ಲಿ ಬೆಳೆದಿದ್ದ 300 ಕ್ವಿಂಟಲ್ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಬೆಳೆ ಸಂಪೂರ್ಣ ಹಾನಿಯಾಗಿರುವ ಘಟನೆ ದಾವಣಗೆರೆಯ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದಲ್ಲಿ ಘಟನೆ ನಡೆದಿದೆ.

ಮೆಕ್ಕೆಜೋಳ ಬೆಂಕಿಗಾಹುತಿ
ಮೆಕ್ಕೆಜೋಳ ಬೆಂಕಿಗಾಹುತಿ

ದಾವಣಗೆರೆ: ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ 300 ಕ್ವಿಂಟಲ್ ಬೆಳೆ ಹಾನಿಯಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದಲ್ಲಿ ನಡೆದಿದೆ.

ರೈತರಾದ ಹಾಲಮ್ಮ, ಗೋಪಾಲಪ್ಪ, ಸೋಮಶೇಖರ್, ರಮೇಶ್ ಹಾಗೂ ಸತೀಶ್ ಎನ್ನುವ ರೈತರಿಗೆ ಸೇರಿದ ಮೆಕ್ಕೆಜೋಳ ಬೆಳೆ ಇದಾಗಿದೆ. ಒಟ್ಟು 13 ಎಕರೆಯಲ್ಲಿ ಬೆಳೆದಿದ್ದ 300 ಕ್ವಿಂಟಾಲ್ ಬೆಳೆ ಸುಟ್ಟು ಕರಕಲಾಗಿದ್ದು, ರೈತರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಯತ್ನಿಸಿದರೂ ಕೂಡ ಇಡೀ ಬೆಳೆ ಬೆಂಕಿಗಾಹುತಿಯಾಗಿದೆ.

ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ತಂಡ ಭೇಟಿ ನೀಡದೆ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details