ದಾವಣಗೆರೆ: ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಎಲ್.ಕೆ.ಅಡ್ವಾಣಿ ನೇತೃತ್ವದ ರಥಯಾತ್ರೆ ನಗರಕ್ಕೆ ಬಂದಾಗ ನಡೆದ ಘರ್ಷಣೆಯಲ್ಲಿ ಹುತಾತ್ಮರಾದವರ ಸ್ಮರಣಾರ್ಥ ರೂಪಿಸಲಾಗಿದ್ದ 11 ಕೆ.ಜಿ ಬೆಳ್ಳಿ ಇಟ್ಟಿಗೆಯನ್ನು ಇಲ್ಲಿನ ರಾಮಮಂದಿರದಲ್ಲಿ ಸಮರ್ಪಿಸಲಾಯಿತು.
ರಾಮಮಂದಿರದಲ್ಲಿ ಬೆಳ್ಳಿ ಇಟ್ಟಿಗೆಗೆ ಪುಷ್ಪಾರ್ಚನೆ, ಹುತಾತ್ಮರಿಗೆ ಗೌರವ - Davangere Rama Temple
ಈ ಬೆಳ್ಳಿ ಇಟ್ಟಿಗೆಯನ್ನು ಹಿಂದೂಪರ ಸಂಘಟನೆ ಮತ್ತು ಬಿಜೆಪಿ ಮುಖಂಡರು ರಾಮ ಮಂದಿರ ಶಿಲಾನ್ಯಾಸದ ವೇಳೆ ನಿರ್ಮಾಣ ಕಾರ್ಯ ಪ್ರಾರಂಭಿಸಿ ಪೂರ್ಣಗೊಳಿಸಿದ್ದಾರೆ. ಸದ್ಯದಲ್ಲಿಯೇ ಅಯೋಧ್ಯೆಗೆ ಈ ಇಟ್ಟಿಗೆಯನ್ನು ಕಳುಹಿಸಿ ಕೊಡಲಿದ್ದಾರೆ.

ದಾವಣಗೆರೆ: ರಾಮಮಂದಿರದಲ್ಲಿ ಬೆಳ್ಳಿ ಇಟ್ಟಿಗೆಗೆ ಪುಷ್ಪಾರ್ಚನೆ, ಹುತಾತ್ಮರಿಗೆ ಗೌರವ
ರಾಮಮಂದಿರದಲ್ಲಿ ಬೆಳ್ಳಿ ಇಟ್ಟಿಗೆಗೆ ಪುಷ್ಪಾರ್ಚನೆ, ಹುತಾತ್ಮರಿಗೆ ಗೌರವ
ಕೊರೊನಾ ಹಿನ್ನೆಲೆ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ನೀತಿ ಸಂಹಿತೆ ಕಾರಣ ಮೆರವಣಿಗೆಗೆ ಅನುಮತಿ ದೊರಕಲಿಲ್ಲ. ಹೀಗಾಗಿ ಹೈಸ್ಕೂಲ್ ಮೈದಾನದ ಪಕ್ಕದಲ್ಲಿರುವ ರಾಮಮಂದಿರದಲ್ಲಿಟ್ಟು ಪುಷ್ಪಾರ್ಚನೆ ಮಾಡಲಾಯಿತು. ಓಂಕಾರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಮರಥದಲ್ಲಿ ಈ ಬೆಳ್ಳಿ ಇಟ್ಟಿಗೆಯನ್ನಿಟ್ಟು ಪುಷ್ಪಾರ್ಚನೆ ಮಾಡಿ ಹುತಾತ್ಮರಾದವರಿಗೆ ನಮನ ಸಲ್ಲಿಸಲಾಯಿತು.
ಸದ್ಯದಲ್ಲಿಯೇ ಈ ಇಟ್ಟಿಗೆಯನ್ನು ಅಯೋಧ್ಯೆಗೆ ಕಳುಹಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.