ದಾವಣಗೆರೆ:ಒಮಿಕ್ರಾನ್ ಆತಂಕ ಜಿಲ್ಲೆಯಲ್ಲಿ ದಟ್ಟವಾಗಿರುವ ಬೆನ್ನಲ್ಲೇ ದಾವಣಗೆರೆಗೆ ವಿದೇಶದಿಂದ 11 ಜನ ಪ್ರಯಾಣಿಕರ ಆಗಮಿಸಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಒಮಿಕ್ರಾನ್ ಹಾವಳಿ ಹೆಚ್ಚಿರುವ ದೇಶಗಳಿಂದ 11 ಜನ ಆಗಮಿಸಿರುವುದ್ದರಿಂದ ದಾವಣಗೆರೆ ಜನರಿಗೆ ಭೀತಿ ಎದುರಾಗಿದೆ. ಕಳೆದ ಎರಡು ದಿನಗಳಲ್ಲಿ 11 ಜನ ವಿದೇಶದಿಂದ ದೇಶಕ್ಕೆ ಬಂದಿದ್ದಾರೆ. ಜಿಲ್ಲೆಗೆ ಯುಎಸ್ಎನಿಂದ 3, ಐರ್ಲೆಂಡ್, ಇಂಗ್ಲೆಂಡ್, ದುಬೈಯಿಂದ ತಲಾ 1, ಜರ್ಮನಿಯಿಂದ 3 ಹಾಗೂ ಇನ್ನಿಬ್ಬರು ಯಾವ ದೇಶದಿಂದ ಬಂದಿದ್ದಾರೆ ಎಂದು ಗೊತ್ತಾಗಿಲ್ಲ.
ವಿದೇಶದಿಂದ ಆಗಮಿಸಿದ ಎಲ್ಲಾ ಪ್ರಯಾಣಿಕರು ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬಂದಿದ್ದರು ಕೂಡ 11 ಜನರನ್ನು 7 ದಿನ ಕ್ವಾರಂಟೈನ್ನಲ್ಲಿ ಇಡಲಾಗಿದೆ. 7 ದಿನದ ನಂತರ ಸ್ಯಾಂಪಲ್ ಪಡೆದು ಲ್ಯಾಬ್ಗೆ ಕಳಿಸಲಾಗುವುದೆಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಇನ್ನು ವಿದೇಶದಿಂದ ಬಂದವರಲ್ಲಿ ಕೆಲವರ ಮಾಹಿತಿ ಸಿಗುತ್ತಿಲ್ಲ. ಅಂತಹವರನ್ನು ಟ್ರೇಸ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
(ಇದನ್ನೂ ಓದಿ: ವಿಮಾನದಲ್ಲಿದ್ದ ಮಹಿಳೆಯ ಆರೋಗ್ಯದಲ್ಲಿ ಏರುಪೇರು: ಮಂಗಳೂರಲ್ಲಿ ತುರ್ತು ಲ್ಯಾಂಡಿಂಗ್)