ಕರ್ನಾಟಕ

karnataka

ETV Bharat / city

ವಿಧಾನಸಭೆಯಲ್ಲಿಂದು ಮಂಡನೆಯಾದ 10 ವಿಧೇಯಕಗಳು ಯಾವುವು? ಪ್ರಮುಖ ಮಸೂದೆಗಳ ಮಹತ್ವ ಇಲ್ಲಿದೆ.. - ಬೆಂಗಳೂರು

ವಿಧಾನಸಭೆ ಅಧಿವೇಶನದಲ್ಲಿಂದು 10 ವಿಧೇಯಕಗಳನ್ನು ಮಂಡಿಸಲಾಗಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಚಿವರು ವಿಧೇಯಕಗಳನ್ನು ಮಂಡಿಸಿದ್ದಾರೆ.

Karnataka  legislative council session live update
ವಿಧಾನಸಭೆ ಅಧಿವೇಶನದಲ್ಲಿಂದು 10 ವಿಧೇಯಕಗಳ ಮಂಡನೆ

By

Published : Sep 14, 2021, 5:54 PM IST

Updated : Sep 14, 2021, 7:47 PM IST

ಬೆಂಗಳೂರು: ವಿಧಾನಸಭೆಯಲ್ಲಿಂದು ಒಟ್ಟು 10 ವಿಧೇಯಕಗಳ ಮಂಡನೆಯಾಗಿದೆ.

ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ)-2021, ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ ವಿಧೇಯಕ-2021, ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ-2021, ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ -2021, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ-2021, ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ)ವಿಧೇಯಕ-2021, ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ-2021, ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ-2021, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ -2021 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು.

ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ:

ಕಾವೇರಿ ನೀರು ಅಥವಾ ಅಂತರ್ಜಲ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಳೆ‌ನೀರು ಕೊಯ್ಲು ಕಡ್ಡಾಯಗೊಳಿಸಲು ಈ ವಿಧೇಯಕವನ್ನು ತರಲಾಗಿದೆ. ಮಳೆ ನೀರು ಒಳಚರಂಡಿಗಳಲ್ಲಿ ಹರಿದು ಹೋಗುವುದನ್ನು ತಗ್ಗಿಸುವುದರ ಜೊತೆಗೆ ನಗರ ಪ್ರವಾಹವನ್ನು ಇಳಿಸಲು ಪೂರಕವಾದ ನಿಯಮಗಳನ್ನೊಳಗೊಂಡ ಅಂಶಗಳನ್ನು ಈ ವಿಧೇಯಕದಲ್ಲಿ ರೂಪಿಸಲಾಗಿದೆ.

ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ 2021:

35-45 ಲಕ್ಷ ರೂ. ನಡುವಿನ ಮೌಲ್ಯದ ಅಪಾರ್ಟ್ಮೆಂಟ್‌ಗಳ ಮೊದಲ ನೋಂದಣಿಗೆ ಮುದ್ರಾಂಕ ಸುಂಕವನ್ನು ಕಡಿಮೆ ಮಾಡಲು ಈ ತಿದ್ದುಪಡಿ ವಿಧೇಯಕ ತರಲಾಗಿದೆ. ಈ ವಿಧೇಯಕ ಮೂಲಕ ಶೇ. 5 ರಿಂದ ಶೇ.3ಕ್ಕೆ ಮುದ್ರಾಂಕ ಸುಂಕವನ್ನು ಕಡಿಮೆ ಮಾಡಲಾಗುತ್ತದೆ.

ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021:

ಬಂದೀಖಾನೆಗಳು ಮತ್ತು ಸುಧಾರಣ ಆಡಳಿತವನ್ನು ಬಲಪಡಿಸಲು ಕೌಶಲ್ಯಾಭಿವೃದ್ಧಿಗಾಗಿ, ಬಂದಿಗಳು ಹಾಗೂ ಬಂದೀಖಾನೆಗಳ ಸಿಬ್ಬಂದಿಯ ಕಲ್ಯಾಣಕ್ಕಾಗಿ ಹಾಗೂ ಬಂದೀಖಾನೆ ಉದ್ಯಮಗಳ ವಿಸ್ತರಣೆಗಾಗಿ ಮಂಡಳಿಯನ್ನು ರಚಿಸಲು ಉದ್ದೇಶಿಸಲಾಗಿದೆ.

ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021:

ಶಾಂತಿಭಂಗ ಮತ್ತು ಹಿಂಸಾಚಾರದ ಪರಿಣಾಮಕಾರಿ ನಿಗಾವಣೆ ಮತ್ತು ಪ್ರತಿಬಂಧಕ್ಕಾಗಿ ಅಪರಾಧಿತ ಭಾವಚಿತ್ರ ಮತ್ತು ಅಳತೆ ದಾಖಲೆಗಳಲ್ಲಿ ರಕ್ತದ ಮಾದರಿ, ಡಿಎನ್‌ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಸೇರಿಸಲಾಗುತ್ತದೆ. ಆ ಮೂಲಕ ಅಪರಾಧಿಗಳ ಗುರುತಿಸುವಿಕೆಯನ್ನು ಇನ್ನಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ‌.

ಈ ವಿಧೇಯಕ ಮೂಲಕ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟರ್ ಜೊತೆಗೆ ಎಸ್‌ಪಿ ಅಥವಾ ಡಿಸಿಪಿಗೆ ಅಳತೆಗಳನ್ನು ಸಂಗ್ರಹಿಸಲು ಆದೇಶಿಸುವ ಅಧಿಕಾರವನ್ನು ನೀಡಲಾಗುತ್ತದೆ. ಹತ್ತು ವರ್ಷಗಳ ನಂತರ ಕೋರ್ಟ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ಸೂಪರಿಂಟೆಂಡೆಂಟ್ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ಡಿಸಿಎಂ ನಿರ್ದೇಶನದ ಹೊರತು ಅಳತೆಗಳ ನಾಶ ಮಾಡುವ ಅಧಿಕಾರವನ್ನು ಎಸ್‌ಪಿ ಅಥವಾ ಡಿಸಿಪಿಗೆ ನೀಡಲಾಗುತ್ತದೆ.

Last Updated : Sep 14, 2021, 7:47 PM IST

ABOUT THE AUTHOR

...view details