ಕರ್ನಾಟಕ

karnataka

ETV Bharat / city

ಮೋದಿ ಬಂದ ಮೇಲೆ ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ? : ಜಮೀರ್ ಕಿಡಿ - ಮೋದಿ ಬಂದ ಮೇಲೆ ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ

ರಾಷ್ಟ್ರೀಯ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಜಮೀರ್ ಅಹ್ಮದ್ ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಮೀರ್ ಅಹ್ಮದ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ
ಜಮೀರ್ ಅಹ್ಮದ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ

By

Published : Jun 22, 2022, 2:24 PM IST

ಬೆಂಗಳೂರು: ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ತನ್ನ ವೈಫಲ್ಯಗಳನ್ನು ಮರೆಮಾಚಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ಇಡಿ ಅಸ್ತ್ರ ಪ್ರಯೋಗಿಸುತ್ತಿರುವುದನ್ನು ಖಂಡಿಸಿ ಚಾಮರಾಜಪೇಟೆಯ ಸಿರ್ಸಿ ವೃತ್ತದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು. ನಮ್ಮ ನಾಯಕರನ್ನು ಗುರಿಯಾಗಿಸಿಕೊಂಡು ವಿಚಾರಣೆ ಮಾಡ್ತಿದ್ದಾರೆ. ಬಿಜೆಪಿಯವರು ಯಾರೂ ತಪ್ಪೇ ಮಾಡಿಲ್ವಾ?. ಡಿ.ಕೆ. ಶಿವಕುಮಾರ್, ಕೆ ಜೆ ಜಾರ್ಜ್ ಮತ್ತು ನನ್ನ ಮೇಲೆ ಇಡಿ ದಾಳಿಯಾಯ್ತು. ಕಾಂಗ್ರೆಸ್​ನವರ ಮೇಲೆ ಮಾತ್ರ ಯಾಕೆ ಇಡಿ ದಾಳಿಯಾಗುತ್ತಿದೆ. ಬಿಜೆಪಿಯವರ ಮೇಲೆ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಜಮೀರ್ ಅಹ್ಮದ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ

ನಾವು ಮನೆ ಕಟ್ಟೋದೇ ತಪ್ಪಾ?, ನಾನು ದೊಡ್ಡ ಮನೆ ಕಟ್ಟಿದೆ ಎಂದು ಇಡಿ ದಾಳಿ ಮಾಡಿಸಿದರು. ಮನೆ ಕಟ್ಟಿದ್ದನ್ನ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಅಷ್ಟರ ಮಟ್ಟಿಗೆ ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿಯನ್ನ ಹೆದರಿಸಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸರ್ಕಾರ ವಿಸರ್ಜಿಸುವ ಸುಳಿವು ನೀಡಿದ ರಾವುತ್​.. ಮಧ್ಯಾಹ್ನ ಸಂಪುಟ ಸಭೆ.. ಉದ್ದವ್​ ಠಾಕ್ರೆಗೂ ಕೋವಿಡ್​​​​+

ABOUT THE AUTHOR

...view details