ಕರ್ನಾಟಕ

karnataka

ETV Bharat / city

15 ಲಕ್ಷ ರೂ. ಮೌಲ್ಯದ ಮಾಸ್ಕ್​ ಖರೀದಿಸಿ ವ್ಯಕ್ತಿಯಿಂದ ವಂಚನೆ ಆರೋಪ

ಯೂಟ್ಯೂಬ್​ ಚಾನೆಲ್​ವೊಂದರ ಮಾಲೀಕ 15 ಲಕ್ಷ ರೂ. ಮೌಲ್ಯದ ಮಾಸ್ಕ್ ಖರೀದಿಸಿ ಅನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ಹೇಳಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ.

By

Published : Dec 7, 2020, 6:51 PM IST

ವೀರೇಶ್
ವೀರೇಶ್

ನೆಲಮಂಗಲ: ಯೂಟ್ಯೂಬ್​ ಚಾನೆಲ್​ವೊಂದರ ಮಾಲೀಕ ಕೆಜಿಗಟ್ಟಲೆ ಬಂಗಾರ ಹಾಕಿಕೊಂಡು ಫಾರ್ಚುನರ್ ಕಾರಿನಲ್ಲಿ ಬಂದು 15 ಲಕ್ಷ ರೂ. ಮೌಲ್ಯದ ಮಾಸ್ಕ್ ಖರೀದಿಸಿ ಅನ್​ಲೈನ್​ನಲ್ಲಿ ಹಣ ಕಳಿಸುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವಂಚನೆ ಕುರಿತು ವೆಲ್​​ನೆಸ್ ಫಾರ್ಮಾ ಸಿಬ್ಬಂದಿ ಪ್ರತಿಕ್ರಿಯೆ

ಬೆಂಗಳೂರಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣವಾರದ ಗಣಪತಿ ನಗರದಲ್ಲಿ ವೆಲ್​​ನೆಸ್ ಫಾರ್ಮಾ ಎಂಬ ಕಂಪನಿಯೊಂದನ್ನು ಸುರೇಂದ್ರ ಸಿಂಗ್ ಎಂಬುವರು ನಡೆಸುತ್ತಿದ್ದರು. ಕೋವಿಡ್-19ಗೆ ಸಂಬಂಧಿಸಿದ ವಸ್ತುಗಳನ್ನು ಸರಬರಾಜು ಮಾಡುವ ಕಂಪನಿ ಇದಾಗಿದ್ದು, ಏಪ್ರಿಲ್​ 16ರ ರಾತ್ರಿ 10.30ರ ಸುಮಾರಿಗೆ ಬಂದ ವೀರೇಶ್, ಮನುಗೌಡ ಮತ್ತು ವಾಣಿ ವಿಜಯ ಕುಮಾರ್ ಎಂಬುವರು ತಾವು ಖಾಸಗಿ ಯೂಟ್ಯೂಬ್ ಚಾನೆಲ್ ಮಾಲೀಕರೆಂದು ಹೇಳಿಕೊಂಡು ಎನ್-95 ಮಾಸ್ಕ್ ಬೇಕಿದೆ ಎಂದು ಸುಮಾರು 15,03,750 ರೂ. ಮೌಲ್ಯದ ಮಾಸ್ಕ್​ಗಳನ್ನು ಖರೀದಿಸಿದ್ದಾರೆ.

ಅನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ಹೇಳಿ ನಾಟಕವಾಡಿ ಈಗ ಹಣ ವರ್ಗಾವಣೆಯಾಗುತ್ತಿಲ್ಲ. ಬೆಳಗ್ಗೆ ಆಫೀಸ್​ಗೆ ಬಂದು ಹಣ ಪಡೆಯುವಂತೆ ತಿಳಿಸಿದ್ದಾರೆ. ವೀರೇಶ್ ಮತ್ತು ಮನುಗೌಡ ಮಾತನ್ನು ನಂಬಿ ಸುರೇಂದ್ರ ಸಿಂಗ್ ಅವರು ಮಾಸ್ಕ್​ಗಳನ್ನು ಕೊಟ್ಟಿದ್ದಾರೆ.

ಬಳಿಕ ಆಫೀಸ್​ಗೆ ಹೋಗಿ ಹಣ ಕೇಳಿದಾಗ, ವಂಚಕರು ಬೆದರಿಕೆ ಹಾಕಿ, ಚೆಕ್ ನೀಡಿದ್ದಾರಂತೆ. ಆದರೆ ವೀರೇಶ್ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ. ಬಳಿಕ ಸುರೇಂದ್ರ ಸಿಂಗ್ 15 ಲಕ್ಷ ರೂ. ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ವೀರೇಶ್, ಮನುಗೌಡ, ವಾಣಿ ವಿಜಯ ಕುಮಾರ್ ವಿರುದ್ಧ ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 406, 420, 504, 506, 34ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕಳೆದ ಮೂರು ತಿಂಗಳಿಂದ ವೆಲ್​​ನೆಸ್ ಫಾರ್ಮಾ ಕಂಪನಿ ನಷ್ಟದಲ್ಲಿದ್ದು, ಇದೀಗ 15 ಲಕ್ಷ ವಂಚನೆಯಿಂದ ಕಂಪನಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದೆ ಎಂದು ಸುರೇಂದ್ರ ಸಿಂಗ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಆನ್‌ಲೈನ್ ವ್ಯಾಪಾರ ಹೂಡಿಕೆಯ ಹೆಸರಿನಲ್ಲಿ 850 ಜನರಿಗೆ ₹34 ಕೋಟಿ ವಂಚನೆ : ಇಬ್ಬರ ಬಂಧನ

ABOUT THE AUTHOR

...view details