ಯಲಹಂಕ: ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಬೆಂಗಳೂರು ಪೊಲೀಸರು ಎಷ್ಟೇ ಕ್ರಮ ಕೈಗೊಂಡಿದ್ದರೂ ಸಹ ಕೆಲ ಪುಂಡರು ಮಾತ್ರ ಬುದ್ಧಿ ಕಲಿತಿಲ್ಲ. ಇಂದು ಬೆಳಗ್ಗೆ ಸಹ ಏರ್ಪೋರ್ಟ್ ರಸ್ತೆಗಿಳಿದಿದ್ದ 30 ಯುವಕರ ಗ್ಯಾಂಗ್ವೊಂದು ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಮೂಲಕ ವಾಹನ ಸವಾರರ ಎದೆಬಡಿತವನ್ನು ಹೆಚ್ಚಿಸಿರುವ ಘಟನೆ ನಡೆದಿದೆ.
ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿ ಪುಂಡರಿಂದ ಬೈಕ್ ವ್ಹೀಲಿಂಗ್... ವಾಹನ ಸವಾರರಿಗೆ ಹೆಚ್ಚಿದ ಎದೆಬಡಿತ
ಬೆಳ್ಳಂಬೆಳಗ್ಗೆ ಏರ್ಪೋರ್ಟ್ ರಸ್ತೆಗಿಳಿದ 30 ಯುವಕರ ಗ್ಯಾಂಗ್ವೊಂದು ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಾ ವಾಹನ ಸವಾರ ಆತಂಕವನ್ನು ಹೆಚ್ಚಿಸುವ ಜೊತೆಗೆ ಅವರ ಆಕ್ರೋಶಕ್ಕೆ ಕಾರಣರಾದರು.
Youths Bike Wheeling on Airport Road
ಒಂದೊಂದು ಬೈಕ್ನಲ್ಲಿ ಮೂವರು ಯುವಕರು ಸವಾರಿ ಮಾಡುತ್ತಾ ರಸ್ತೆ ನಿಯಮ ಉಲ್ಲಂಘಿಸಿರುವುದರ ಜೊತೆಗೆ, ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಯಲಹಂಕದ ಬೈಪಾಸ್ ರಸ್ತೆಯಿಂದ ಏರ್ಪೋರ್ಟ್ ಕಡೆಗೆ ಸಾಗಿದ ಯುವಕರ ಗ್ಯಾಂಗ್, ವಿಕೆಂಡ್ ಹಿನ್ನೆಲೆ ಈ ರೀತಿ ಪುಂಡಾಟ ಮೆರೆದಿದ್ದಾರೆ ಎನ್ನಲಾಗ್ತಿದೆ.
ಇನ್ನು, ಏರ್ಪೋರ್ಟ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಸಾಮಾನ್ಯ ಎಂಬಂತೆ ಕಂಡುಬರುತ್ತಿದೆ. ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.
Last Updated : Feb 2, 2020, 12:35 PM IST