ಬೆಂಗಳೂರು: ತಡರಾತ್ರಿ ಯುವಕನನ್ನು ಅಪರಿಚಿತರು ಕೊಲೆಗೈದಿರುವ ಘಟನೆ ಜಗಜೀವನರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಚಂದ್ರಶೇಖರ್(19) ಎಂದು ಗುರುತಿಸಲಾಗಿದೆ. ಐಟಿಐ ವ್ಯಾಸಂಗ ಮಾಡಿದ್ದ ಚಂದ್ರಶೇಖರ್, ರೈಲ್ವೇ ಇಲಾಖೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ.
ಬೆಂಗಳೂರು: ತಡರಾತ್ರಿ ಅಪರಿಚಿತರಿಂದ ಯುವಕನ ಕೊಲೆ - Youth stabbed to death in Bangalore
ಅಪರಿಚಿತರು ಯುವಕನನ್ನು ಚೂರಿಯಿಂದ ಇರಿದು ಹತ್ಯೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಡರಾತ್ರಿ ಅಪರಿಚಿತರಿಂದ ಯುವಕನ ಕೊಲೆ: ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲು
ಕಳೆದ ರಾತ್ರಿ ಸ್ನೇಹಿತ ಸೈಮನ್ ಎಂಬಾತನ ಹುಟ್ಟುಹಬ್ಬದ ಪ್ರಯುಕ್ತ ಚಂದ್ರಶೇಖರ್ ಹೊರಗಡೆ ತೆರಳಿದ್ದ ಎಂದು ತಿಳಿದುಬಂದಿದೆ. ರಾತ್ರಿ ಮಾರ್ಗಮಧ್ಯೆ ಬೈಕ್ ತಗುಲಿದ ವಿಚಾರಕ್ಕಾಗಿ ಅಪರಿಚಿತರೊಂದಿಗೆ ಗಲಾಟೆ ನಡೆದು ಜಗಳ ತಾರಕಕ್ಕೇರಿದೆ. ಈ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವಕನ ಸ್ನೇಹಿತರು ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂಓದಿ:ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ