ಬೆಂಗಳೂರು: ಕುಡಿತದ ಚಟ ಬಿಡಲು ಚಿಕಿತ್ಸೆಗಾಗಿ ಮನಪರಿವರ್ತನಾ ಕೇಂದ್ರಕ್ಕೆ ಸೇರಿಕೊಂಡಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಸಂಬಂಧ ಮೃತನ ಕುಟುಂಬಸ್ಥರು ರಿಹ್ಯಾಬಿಲಿಟೇಷನ್ ಸೆಂಟರ್ ವಿರುದ್ಧ ಬಂಡೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಭಾಷ್ ಪಾಂಡ್ಯನ್ ಮೃತ ಯುವಕ. ಡಿ.ಜೆ.ಹಳ್ಳಿಯ ನಿವಾಸಿ ಪಾಂಡ್ಯನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಸುಭಾಷ್, ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳಿಂದ ಈತ ಮದ್ಯ ವ್ಯಸನಿಯಾಗಿದ್ದ. ಕುಡಿತ ಚಟ ಬಿಡಿಸಲು ಕುಟುಂಬಸ್ಥರು ಮಂಗಮ್ಮನ ಪಾಳ್ಯದಲ್ಲಿರುವ ಎಂ.ಆರ್.ಆರ್. ಮದ್ಯ ಹಾಗು ಡ್ರಗ್ಸ್ ವ್ಯಸನ್ಯ ಮುಕ್ತ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು.
ರಿಹ್ಯಾಬಿಲಿಟೇಷನ್ ಸೆಂಟರ್ ಮೊರೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು ತಿಂಗಳಿಗೆ 10 ಸಾವಿರ ರೂ.ನಂತೆ ನಾಲ್ಕು ತಿಂಗಳಿಗೆ 40 ಸಾವಿರ ರೂ.ಗಳನ್ನು ಪೋಷಕರು ಪಾವತಿಸಿದ್ದರು. ಇದರಂತೆ ಹಲವು ದಿನಗಳಿಂದ ಮನಪರಿವರ್ತನಾ ಕೇಂದ್ರದಲ್ಲಿ ಸುಭಾಷ್ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ನ.28ರಂದು ರಿಹ್ಯಾಬಿಲಿಟೇಷನ್ ಸೆಂಟರ್ ಮಾಲೀಕ ರಾಘವೇಂದ್ರ ಕರೆ ಮಾಡಿ ಸುಭಾಷ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಮಗ ಸಾವನ್ನಪ್ಪಿರುವುದು ಗೊತ್ತಾಗಿದೆ. ಮಗನ ಸಾವಿನ ಹಿಂದೆ ಅನುಮಾನವಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಮೃತನ ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನ ಊಟಿ ಬಳಿ ಭೀಕರ ದುರಂತ; ಸಿಡಿಎಸ್ ಬಿಪಿನ್ ರಾವತ್ ಸೇರಿ ಹಲವರಿದ್ದ ಹೆಲಿಕಾಪ್ಟರ್ ಪತನ