ಬೆಂಗಳೂರು: ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ನಡೆದ ಯಡವಟ್ಟಿಗೆ ಯುವತಿ ಬಲಿಯಾದ ಘಟನೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಾಯಂಡಹಳ್ಳಿಯ ಜೆಡ್ ಎಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಸಂಜೆ 5.15ರ ಸುಮಾರಿಗೆ ದುರಂತ ಸಂಭವಿಸಿದೆ.
ಯಂತ್ರದ ಬೆಲ್ಟ್‌ಗೆ ವೇಲ್ ಸಿಲುಕಿ ಯುವತಿ ಸಾವು: ಕಾರ್ಖಾನೆ ಮಾಲೀಕನ ವಿರುದ್ಧ ಪ್ರಕರಣ - Bengaluru latest crime news
ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ನಡೆದ ಅನಾಹುತಕ್ಕೆ ಯುವತಿ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಾಜಿಯಾ
ಶಾಜಿಯಾ (28) ಮೃತ ಯುವತಿ. ಯಂತ್ರವನ್ನು ಸ್ವಿಚ್ ಆಫ್ ಮಾಡುವಾಗ ಅದರ ಬೆಲ್ಟ್‌ಗೆ ತಾನು ಧರಿಸಿದ್ದ ವೇಲ್ ಸಿಲುಕಿದ್ದು, ಯಂತ್ರದ ಮೇಲೆಯೇ ಸಮತೋಲನ ಕಳೆದುಕೊಂಡು ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಫ್ಯಾಕ್ಟರಿ ಮಾಲೀಕನ ನಿರ್ಲಕ್ಷ್ಯ ಹಾಗೂ ಮುಂಜಾಗ್ರತಾ ಪರಿಕ್ರಮಗಳನ್ನು ನೀಡದೇ ಇರುವುದೇ ಕಾರಣ ಎನ್ನಲಾಗಿದೆ. ಮಾಲೀಕ ಜೀಶಾನ್ ವಿರುದ್ದ ಚಂದ್ರ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated : Apr 5, 2022, 1:43 PM IST