ಬೆಂಗಳೂರು: ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂರು ದಿನದ ಹಿಂದೆ ಪೀಣ್ಯ ಎಸ್‍ಆರ್‌ಎಸ್ ಸರ್ಕಲ್ ಬಳಿ ಮೂವರು ಯುವಕರು ಗಾಂಜಾ ಸೇವಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಬೀಟ್ ಪೊಲೀಸರು ಸ್ಥಳಕ್ಕೆ ಹೋದಾಗ ಅಲ್ಲಿದ್ದ ಯುವಕರು ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಗಾಂಜಾ ಸೇವಿಸುವಾಗ ಪೊಲೀಸರ ದಾಳಿ: ಎಸ್ಕೇಪ್ ಆಗಲು ಯತ್ನಿಸಿ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವು..! - ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕ ಸಾವು
ಯುವಕನೊಬ್ಬ ಪೊಲೀಸರನ್ನು ಕಂಡು ಬಿಲ್ಡಿಂಗ್ ಹತ್ತಲು ಹೋಗಿ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯುವಕ ಸಾವು
ಓದಿ:ಹೈದರಾಬಾದ್: ಮಾದಕ ದ್ರವ್ಯ ಸೇವಿಸಿದ ಪುಂಡರ ಗಲಾಟೆ, ಪೊಲೀಸ್ ವಾಹನ ಜಖಂ
ಪೊಲೀಸರನ್ನು ಕಂಡು ರವಿ ಎಂಬ ಯುವಕ ಬಿಲ್ಡಿಂಗ್ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಬಿಲ್ಡಿಂಗ್ ಹಾರುವ ವೇಳೆ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ರವಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ರವಿ 28 ರಂದು ಮೃತಪಟ್ಟಿದ್ದಾನೆ. ಇನ್ನೂ ಘಟನೆ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.