ಕರ್ನಾಟಕ

karnataka

ETV Bharat / city

ಕಳ್ಳತನ ಆರೋಪ ಹೊರಿಸಿದ್ದಕ್ಕೆ 24 ವರ್ಷದ ಯುವಕ ಆತ್ಮಹತ್ಯೆ - ಬೆಂಗಳೂರು ಕ್ರೈಂ ಸುದ್ದಿ

ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಯುವಕನ ಮೇಲೆ ಅಂಗಡಿ ಮಾಲೀಕ ಕಳ್ಳತನದ ಆರೋಪ ಹೊರಿಸಿದ್ದಕ್ಕೆ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪುನೀತ್
ಪುನೀತ್

By

Published : Sep 24, 2021, 2:08 PM IST

ಬೆಂಗಳೂರು: ಯುವಕರು ಸಮಸ್ಯೆಗಳಿಂದ ದೂರ ಆಗಲು ಸುಲಭವಾದ ಪರಿಹಾರ ಹುಡುಕಿಕೊಳ್ಳೊದು ಅಂದರೆ ಅದು ಆತ್ಮಹತ್ಯೆ. ಯಾವುದೇ ಸಮಸ್ಯೆ ಎದುರಾದರೂ ಅವುಗಳನ್ನ ಧೈರ್ಯದಿಂದ ಎದುರಿಸುವ ಶಕ್ತಿ ಇಂದಿನ ಯುವಜನತೆಗೆ ಇಲ್ಲದಂತಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ರಾಜಧಾನಿಯಲ್ಲಿ ನಡೆದ ಈ ಘಟನೆ.

ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಪುನೀತ್ ಎಂಬ 24 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನ್ನ ಮೇಲೆ ಅಂಗಡಿ ಮಾಲಿಕ ಕಳ್ಳತನದ ಆರೋಪ ಹೊರಿಸಿದ್ದಕ್ಕೆ ಮನನೊಂದ ಪುನೀತ್​ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ಕೀಟಲೆ ಮಾಡಿದ ಆಟೋ ಡ್ರೈವರ್​ನ್ನು ಅಟ್ಟಾಡಿಸಿದ ಕೋತಿ: ಮಂಗನ ಕೋಪಕ್ಕೆ ಬೆಚ್ಚಿಬಿದ್ದ ಮೂಡಿಗೆರೆ ಜನ

ಈ ವಿಚಾರದ ಬಗ್ಗೆ ಎರಡ್ಮೂರು ದಿನಗಳಿಂದಲೂ ಯುವಕ ಹಾಗೂ ಮಾಲೀಕನ ಜೊತೆ ಮಾತುಕತೆ ನಡೆಯುತ್ತಲೇ ಇತ್ತು. ಇನ್ನು ಪೊಲೀಸ್ ಕಂಪ್ಲೆಂಟ್ ಕೊಡ್ತೀನಿ ಅಂತಾ ಮಾಲೀಕ ಯುವಕನಿಗೆ ಹೇಳಿದ್ದನಂತೆ. ಇದರಿಂದ ಮನನೊಂದ ಪುನೀತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ‌‌.

ABOUT THE AUTHOR

...view details