ಕರ್ನಾಟಕ

karnataka

ETV Bharat / city

ಶ್ರೀರಾಮನ ವಿಚಾರದಲ್ಲಿ ರಾಜಕಾರಣ ಮಾಡಿದರೆ ರಾವಣನಿಗಾದ ಗತಿಯೇ ಆದೀತು: ಡಿಸಿಎಂ ಸವದಿ - vishwa hindu parishat

ದುರದೃಷ್ಟವಶಾತ್ ಇದನ್ನು ವಿರೋಧಿಸುತ್ತಿರುವವರು ವಿನಾಕಾರಣ ಈ ಬಗ್ಗೆ ಅಪಸ್ವರ ಎತ್ತಿ ವಿವಾದ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಈ ರೀತಿಯ ಕಲ್ಮಶ ಪೂರಿತ ಹೇಳಿಕೆ ನೀಡುತ್ತಿದ್ದರೆ ಸಾರ್ವಜನಿಕರು ಸಹಿಸುವುದಿಲ್ಲ ಎಂಬುದನ್ನು ಇವರು ಗಮನಿಸಿದರೆ ಒಳ್ಳೆಯದು‌ ಎಂದು ಎಚ್ಚರಿಕೆ ನೀಡಿದರು.

ಡಿಸಿಎಂ ಸವದಿ
ಡಿಸಿಎಂ ಸವದಿ

By

Published : Feb 17, 2021, 2:56 AM IST

ಬೆಂಗಳೂರು:ಸ್ವಯಂಕೃತ ಅಪರಾಧದಂತೆ ಶ್ರೀರಾಮನ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟರೆ ರಾವಣನಿಗೆ ಆದಂತಹ ಗತಿಯೇ ಆದೀತು ಎಂಬ ಎಚ್ಚರ ಇದ್ದರೆ ಒಳ್ಳೆಯದು ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವುದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶ್ರೀರಾಮ ಮಂದಿರವನ್ನು ನಿರ್ಮಿಸುವ ದೊಡ್ಡ ಪುಣ್ಯದ ಕೆಲಸದಲ್ಲಿ ಇಡೀ ದೇಶದ ಎಲ್ಲ ಜನಾಂಗದವರು, ಎಲ್ಲಾ ಧರ್ಮದವರು ಸ್ವಯಂಪ್ರೇರಣೆಯಿಂದ ತಮ್ಮ ತನು ಮನ ಧನ ಅರ್ಪಿಸಿ ಪುನೀತರಾಗುತ್ತಿದ್ದಾರೆ. ಸಂಘಪರಿವಾರ ಆಗಲಿ ಅಥವಾ ವಿಶ್ವ ಹಿಂದೂ ಪರಿಷತ್ ಆಗಲಿ ಎಲ್ಲಿಯೂ ರಾಮಮಂದಿರ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಬದಲಿಗೆ ಕೋಟ್ಯಂತರ ಜನರೇ ತಾ ಮುಂದು ತಾ ಮುಂದು ಎಂದು ದೇಣಿಗೆ ಕೊಟ್ಟು ಕೃತಾರ್ಥರಾಗುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ದುರದೃಷ್ಟವಶಾತ್ ಇದನ್ನು ವಿರೋಧಿಸುತ್ತಿರುವವರು ವಿನಾಕಾರಣ ಈ ಬಗ್ಗೆ ಅಪಸ್ವರ ಎತ್ತಿ ವಿವಾದ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಈ ರೀತಿಯ ಕಲ್ಮಶ ಪೂರಿತ ಹೇಳಿಕೆ ನೀಡುತ್ತಿದ್ದರೆ ಸಾರ್ವಜನಿಕರು ಸಹಿಸುವುದಿಲ್ಲ ಎಂಬುದನ್ನು ಇವರು ಗಮನಿಸಿದರೆ ಒಳ್ಳೆಯದು‌ ಎಂದು ಎಚ್ಚರಿಕೆ ನೀಡಿದರು.

ಇವರು ಯಾರನ್ನು ಓಲೈಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಎಲ್ಲರಿಗೂ ಅರ್ಥವಾಗುವ ಸಂಗತಿ. ವಿಶ್ವಹಿಂದೂ ಪರಿಷತ್ತಿನಂತ ನಿಷ್ಠಾವಂತ ಮತ್ತು ಪ್ರಾಮಾಣಿಕ ಸೇವಾ ಸಂಸ್ಥೆಗಳ ಬಗ್ಗೆ ಹೀಗೆ ವಿನಾಕಾರಣ ಆರೋಪಿಸಲು ತಮಗೆ ನೈತಿಕ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಇವರು ಮತ್ತೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಕಿವಿ ಮಾತು ಹೇಳಿದ್ದಾರೆ.

ABOUT THE AUTHOR

...view details