ಬೆಂಗಳೂರು: ನಿನ್ಗೆ ಅನೇಕ ಕನ್ನಡದ ಪದಗಳು ಗೊತ್ತಾಗಲ್ಲ ದೇಶಪಾಂಡೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಆಸ್ಕರ್ ಪರ್ನಾಂಡಿಸ್ ಅವರ ನಿಧನದ ಸಂತಾಪ ಸೂಚಕದ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದಾಗ ಫರ್ನಾಂಡಿಸ್ ಅವರು ಕೇಂದ್ರದಲ್ಲಿ ಭೂಸಾರಿಗೆ ಸಚಿವರಾಗಿದ್ದರು ಎಂದು ಹೇಳಿದ್ದರು.
'ನಿನ್ಗೆ ಅನೇಕ ಕನ್ನಡ ಪದಗಳು ಗೊತ್ತಾಗಲ್ಲ' - ದೇಶಪಾಂಡೆ ಕಿಚಾಯಿಸಿದ ಸಿದ್ದರಾಮಯ್ಯ - ದೇಶಪಾಂಡೆ
ನಿನ್ಗೆ ಅನೇಕ ಕನ್ನಡದ ಪದಗಳು ಗೊತ್ತಾಗಲ್ಲ ದೇಶಪಾಂಡೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ್ದಾರೆ. ವಿಧಾನಸಭೆ ಅಧಿವೇಶನದ ವೇಳೆ ಈ ಪ್ರಸಂಗ ನಡೆದಿದೆ.
'ನಿನ್ಗೆ ಅನೇಕ ಕನ್ನಡ ಪದಗಳು ಗೋತ್ತಾಗಲ್ಲ' - ದೇಶಪಾಂಡೆಯವರನ್ನು ಕಿಚಾಯಿಸಿದ ಸಿದ್ದರಾಮಯ್ಯ
ಈ ವೇಳೆ ದೇಶಪಾಂಡೆಯವರು ಸರ್ಫೇಸ್ ಟ್ರಾನ್ಸ್‌ಪೋರ್ಟ್ ಎಂದು ಹೇಳಿದರು, ಆಗ ಸಿದ್ದರಾಮಯ್ಯ ಕನ್ನಡದಲ್ಲಿ ಅದನ್ನು ಭೂ ಸಾರಿಗೆ ಅಂತ ಹೇಳ್ತಾರೆ, ನಿನ್ಗೆ ಅನೇಕ ಕನ್ನಡ ಪದಗಳು ಗೊತ್ತಾಗಲ್ಲ ಬಿಡಯ್ಯ ಎಂದರು. ಈ ವೇಳೆ ನಾನು ಕೂಡ ಭೂ ಸಾರಿಗೆ ಅಂತನೇ ಹೇಳಿದ್ದು ಎಂದು ದೇಶಪಾಂಡೆ ಪುನರುಚ್ಚರಿಸಿದರು.