ಬೆಂಗಳೂರು: ದೇಶದಲ್ಲಿ ಈಗಾಗಲೇ ಕಪ್ಪು ಶಿಲೀಂದ್ರ ಹಾವಳಿ ಶುರುವಾಗಿದೆ. ಕೊರೊನಾ ಕಂಟ್ರೋಲ್ ನಡುವೆ ಕಪ್ಪು, ಬಿಳಿಯ ಶಿಲೀಂದ್ರ ಜೊತೆಗೆ ಇದೀಗ ಹಳದಿ ಶಿಲೀಂದ್ರ ಭೀತಿ ಶುರುವಾಗಿದೆ.
ಹಳದಿ ಶಿಲೀಂದ್ರದ ಬೆನ್ನಲ್ಲೇ ತಾಂತ್ರಿಕ ಸಲಹಾ ಸಮಿತಿ ಸಭೆಗೆ ಮುಂದಾದ ಸರ್ಕಾರ
ಕಪ್ಪು ಶಿಲೀಂದ್ರಕ್ಕೆ ನೀಡುವ ಔಷಧ ಇರುವಾಗ, ಹಳದಿ ಫಂಗಸ್ ಎಂಟ್ರಿ ಆದರೆ ಮುಂದೇನು ಅನ್ನೋ ಆತಂಕ ಕಾಡ್ತಿದೆ. ಇತ್ತ ಯುಪಿಯಲ್ಲಿ ಯೆಲ್ಲೋ ಫಂಗಸ್ ವರದಿ ಬೆನ್ನಲ್ಲೇ ರಾಜ್ಯ ಸರ್ಕಾರವೂ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲು ಮುಂದಾಗಿದೆ.
ಸರ್ಕಾರ
ಕಪ್ಪು ಶಿಲೀಂದ್ರಕ್ಕೆ ನೀಡುವ ಔಷಧ ಇರುವಾಗ, ಹಳದಿ ಫಂಗಸ್ ಎಂಟ್ರಿ ಆದರೆ ಮುಂದೇನು ಅನ್ನೋ ಆತಂಕ ಕಾಡ್ತಿದೆ. ಇತ್ತ ಯುಪಿಯಲ್ಲಿ ಯೆಲ್ಲೋ ಫಂಗಸ್ ವರದಿ ಬೆನ್ನಲ್ಲೇ ರಾಜ್ಯ ಸರ್ಕಾರವೂ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲು ಮುಂದಾಗಿದೆ.
ಸದ್ಯ ರಾಜ್ಯದಲ್ಲಿ ಯೆಲ್ಲೋ ಫಂಗಸ್ ಪೀಡಿತರು ಪತ್ತೆಯಾಗದೇ ಇದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಸಮಿತಿಯೊಂದಿಗೆ ಸಭೆ ನಡೆಸುವುದಾಗಿ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.