ಬೆಂಗಳೂರು: ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿ ರೈಲು ಮಾರ್ಗದ ತಾತ್ಕಾಲಿಕ ತಡೆಯ ನಿಮಿತ್ತ ಇಂದು ರೈಲು ಸಂಖ್ಯೆ 15227 ಯಶವಂತಪುರ- ಮುಜಫರ್ಪುರ ಎಕ್ಸ್ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ.
ಪ್ರಯಾಣಿಕರ ಗಮನಕ್ಕೆ.. ಭಾರಿ ಮಳೆಯಿಂದ ಯಶವಂತಪುರ - ಮುಜಫರ್ಪುರ ಎಕ್ಸ್ಪ್ರೆಸ್ ರೈಲು ಸೇವೆ ರದ್ಧು - ಯಶವಂತಪುರ- ಮುಜಫರ್ಪುರ ಎಕ್ಸ್ಪ್ರೆಸ್ ರೈಲು ಸೇವೆ ರದ್ಧು
ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿರುವ ಕಾರಣದಿಂದ ಇಂದು ರೈಲು ಸಂಖ್ಯೆ 15227 ಯಶವಂತಪುರ - ಮುಜಫರ್ಪುರ ಎಕ್ಸ್ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ.
![ಪ್ರಯಾಣಿಕರ ಗಮನಕ್ಕೆ.. ಭಾರಿ ಮಳೆಯಿಂದ ಯಶವಂತಪುರ - ಮುಜಫರ್ಪುರ ಎಕ್ಸ್ಪ್ರೆಸ್ ರೈಲು ಸೇವೆ ರದ್ಧು Yashwantpur-Muzaffarpur express train canceled](https://etvbharatimages.akamaized.net/etvbharat/prod-images/768-512-13728535-thumbnail-3x2-news.jpg)
ಸಾಂದರ್ಭಿಕ ಚಿತ್ರ
ನ.26 ರಂದು ಬೆಂಗಳೂರು ವಿಭಾಗದ ಹೊಸೂರು ಭಾಗದಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವ ನಿಮಿತ್ತ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.
- ರೈಲು ಸಂಖ್ಯೆ 06262 ಹೊಸೂರು- ಕೆಎಸ್ಆರ್ ಬೆಂಗಳೂರು ಮೆಮು ರೈಲನ್ನು ಬೈಯ್ಯಪ್ಪನಹಳ್ಳಿಯಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 07315 ಯಶವಂತಪುರ-ಸೇಲಂ ಕಾಯ್ದಿರಿಸದ ವಿಶೇಷ ಪ್ಯಾಸೆಂಜರ್ ರೈಲನ್ನು ಲೊಟ್ಟೆಗೊಲ್ಲಹಳ್ಳಿಯಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಇದನ್ನೂ ಓದಿ:ಆಸ್ತಿ ಅಧಿಕೃತವಿರಲಿ, ಅನಧಿಕೃತವಿರಲಿ ಗುರುತಿನ ಸಂಖ್ಯೆ ನೀಡಿ : ಬಿಬಿಎಂಪಿಗೆ ಹೈಕೋರ್ಟ್ ಆದೇಶ