ಕರ್ನಾಟಕ

karnataka

ETV Bharat / city

ರಾಕಿಂಗ್​ ಜೋಡಿಗೆ 5ನೇ ವರ್ಷದ ವಿವಾಹ ಸಂಭ್ರಮ.. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ರಾಧಿಕಾ - Radhika pandit photo upload at Instagram

ಕನ್ನಡ ಚಿತ್ರರಂಗದಲ್ಲಿ ಕ್ಯೂಟ್​ ಕಪಲ್​ ಅಂತಾನೆ ಕರೆಯಿಸಿಕೊಳ್ಳುವ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 5 ನೇ ವರ್ಷದ ವಿವಾಹ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ದಿನ ರಾಕಿಂಗ್​ ಜೋಡಿಗೆ ವೆರಿ ಸ್ಪೆಷಲ್​ ಆಗಿದೆ.

anniversary
ವಿವಾಹ ಸಂಭ್ರಮ

By

Published : Dec 9, 2021, 5:30 PM IST

Updated : Dec 9, 2021, 6:29 PM IST

ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಕ್ಯೂಟ್​ ಕಪಲ್​ ಅಂತಾನೆ ಕರೆಯಿಸಿಕೊಳ್ಳುವ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ತಮ್ಮ 5 ನೇ ವರ್ಷದ ವಿವಾಹ ದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ದಿನ ರಾಕಿಂಗ್​ ಜೋಡಿಗೆ ವೆರಿ ಸ್ಪೆಷಲ್​ ಆಗಿದೆ.

ರಾಕಿಂಗ್​ ಜೋಡಿಗೆ ಇಂದು ಸ್ಪೆಷಲ್​ ಡೇ ಕಾರಣ ರಾಧಿಕಾ ಪಂಡಿತ್ ಅವರು ಯಶ್ ಜೊತೆಗಿರುವ ಫೋಟೊವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಯಶ್ ಜೊತೆಗೆ ಬೀಚ್​ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋ ಇದಾಗಿದ್ದು, 5 ವರ್ಷದ ದಾಂಪತ್ಯ ಜೀವನದ ಬಗ್ಗೆ ರಾಧಿಕಾ ಪಂಡಿತ್ ಯಶ್ ವ್ಯಕ್ತಿತ್ವದ ಬಗ್ಗೆ ಕೊಂಡಾಡಿದ್ದಾರೆ.

ರಾಕಿಂಗ್​ ಜೋಡಿಗೆ 5ನೇ ವರ್ಷದ ವಿವಾಹ ಸಂಭ್ರಮ

ಇದನ್ನೂ ಓದಿ: RRR Trailer ನೋಡಿದ್ರಾ?: ಯೂಟ್ಯೂಬ್-ಥಿಯೇಟರ್​ಗಳಲ್ಲಿ ‘ಆರ್‌ಆರ್‌ಆರ್‌’ ಟ್ರೈಲರ್ ರಿಲೀಸ್

ಇನ್ನು ಕಿರುತೆರೆಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಮೊಗ್ಗಿನ ಮನಸು ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದರು. ಯಶ್ ಮತ್ತು ರಾಧಿಕಾ ಪಂಡಿತ್ 7 ವರ್ಷಗಳ ಪ್ರೀತಿಯ ಬಳಿಕ ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದರು.

ಮದುವೆಯ ವೇಳೆಯಲ್ಲಿನ ಪೋಟೋ

ಬಳಿಕ 2016 ಡಿಸೆಂಬರ್ 9ರಂದು ಯಶ್ ಮತ್ತು ರಾಧಿಕಾ ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಸುಂದರ ಜೋಡಿಗೆ ಈಗ ಐರಾ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿ 5ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಸ್ನೇಹಿತರು ಹಾಗೂ ಅವರ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.

Last Updated : Dec 9, 2021, 6:29 PM IST

ABOUT THE AUTHOR

...view details